ಶಂಕರ ಬಿದರಿಯಿಂದ ಇನ್ನೂ ಒಂದು ಗೋಲ್ ಮಾಲ್

bidari-supress-nhrc-report-got-president-medal-court
ಬೆಂಗಳೂರು,ಮಾ.29: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಶಂಕರ ಮಹಾದೇವ ಬಿದರಿ ನೇಮಕಗೊಂಡಿರುವುದೇ ವಿವಾದಗ್ರಸ್ತವಾಗಿರುವಾಗ, ಆ ಪ್ರಕರಣದ ವಿಚಾರಣೆ ನಡೆಸುವ ಸಂದರ್ಭದಲ್ಲಿ ಬಿದರಿಯಿಂದ ಮತ್ತೊಂದು ಮರಾಮೋಸ ಜರುಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ. ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಆ ಬಗ್ಗೆ ಬಿದರಿಗೆ ಛೀಮಾರಿಯೂ ಹಾಕಿದೆ.

ಮಾಹಿತಿಯನ್ನು ಮರೆಮಾಚಿ ಅತ್ಯಂತ ಮಹತ್ವದ ಹಾಗೂ ಜವಾಬ್ದಾರಿಯುತ ಪೊಲೀಸ್‌ ಮಹಾನಿರ್ದೇಶಕ ಹುದ್ದೆಯನ್ನು ಹೇಗೆ ಗಿಟ್ಟಿಸಿದ್ದರೋ ಅದೇ ರೀತಿ ಮತ್ತೆ ಮಾಹಿತಿ ಮರೆಮಾಚಿ ಬಿದರಿ ರಾಷ್ಟ್ರಪತಿ ಪದಕ ಗಿಟ್ಟಿಸಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬಂದಿವೆ.

ಕಾಡುಗಳ್ಳ ವೀರಪ್ಪನ್‌ ಕಾರ್ಯಚರಣೆಯ ವೇಳೆ ಎಸ್‌ಟಿಎಫ್ ನಡೆಸಿದೆ ಎನ್ನಲಾದ ಮಾನವ ಹಕ್ಕು ಉಲ್ಲಂಘನೆ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿ ಯನ್ನು ರಾಷ್ಟ್ರಪತಿಗಳ ಗಮನಕ್ಕೆ ತಾರದೆ ಶಂಕರ ಬಿದರಿಗೆ ರಾಷ್ಟ್ರಪತಿ ಪದಕ ದಕ್ಕುವಂತೆ ಮಾಡಲಾಗಿದೆ ಎಂಬ ಆರೋಪ ಇದಾಗಿದೆ. ಇದು DG-IGP ಶಂಕರ ಬಿದರಿ ಅವರ ಬಗ್ಗೆ ಹೈಕೋರ್ಟ್‌ನ ವಿಭಾಗೀಯ ಪೀಠ ವ್ಯಕ್ತಪಡಿಸಿರುವ ಅಭಿಪ್ರಾಯ.

ಮಾಹಿತಿ ಮರೆಮಾಚಿದ್ದಕ್ಕೆ ರಾಷ್ಟ್ರಪತಿ ಪದಕ!: ಬಿದರಿ ಅವರ DG-IGP ಹುದ್ದೆ ನೇಮಕವನ್ನು ಅನೂರ್ಜಿತಗೊಳಿಸಿ ಸಿಎಟಿ ಆದೇಶ ನೀಡಿತ್ತು. ಇದರ ವಿರುದ್ಧ ಮೇಲ್ಮನವಿ ಬಿದರಿ (ರಾಜ್ಯ ಸರಕಾರವೂ) ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ಕುರಿತು ಹೈಕೋರ್ಟ್‌ ನ್ಯಾ. ಎನ್‌. ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಬಿದರಿ ಪರ ವಾದ ಮಾಡಿದ ವಕೀಲ ರಾಜಗೋಪಾಲ ಅವರು, ಆಯೋಗದ ವರದಿಯಲ್ಲಿ ತಮ್ಮ ಕಕ್ಷಿದಾರನ ಹೆಸರಿಲ್ಲ ಎಮದು ವಾದಿಸಿದರು.

ಅಷ್ಟೇ ಅಲ್ಲ. ತಮ್ಮ ಕಕ್ಷಿದಾರರ ಬಗ್ಗೆ certificate ಸಲ್ಲಿಸುವ ಭರದಲ್ಲಿ ನಮ್ಮ ಬಿದರಿ ಸಾಹೇಬರ ಕಾರ್ಯದಕ್ಷತೆಗೆ ಎರಡು ಬಾರಿ 'ರಾಷ್ಟ್ರಪತಿ ಪದಕ' ಒಲಿದಿದೆ ಎಂದು ನ್ಯಾಯಾಲಯದ ಗಮನ ಸೆಳೆದರು. ಅಷ್ಟು ಸಾಕಿತ್ತು ನ್ಯಾಯಪೀಠಕ್ಕೆ....

'ದೇಶದಲ್ಲಿ ರೈಲು ಅಪಘಾತ ಸಂಭವಿಸಿದರೆ, ಅದಕ್ಕೆ ರೈಲ್ವೆ ಮಂತ್ರಿಗಳು ನೈತಿಕ ಹೊಣೆ ಹೊರಬೇಕಾಗುತ್ತದೆ. ಅದರಂತೆ ವೀರಪ್ಪನ್‌ ಕಾರ್ಯಚರಣೆ ವೇಳೆ ಸ್ಥಳೀಯರ ಮೇಲೆ ಎಸ್‌ಟಿಎಫ್ ದೌರ್ಜನ ನಡೆಸಿದ್ದರೆ, ಅದಕ್ಕೆ ಎಸ್‌ಟಿಎಫ್ ಮುಖ್ಯಸ್ಥರಾಗಿದ್ದ ಶಂಕರ ಬಿದರಿ ನೈತಿಕ ಹೊಣೆ ಹೊರಬೇಕಾಗುತ್ತದೆ. ಅಲ್ಲದೆ ಈ ಬಗ್ಗೆ ಉಲ್ಲೇಖೀಸಿರುವ ಆಯೋಗದ ವರದಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೂ ಲಭ್ಯವಾಗಿಲ್ಲ ಎನ್ನುವುದಾದರೆ, ವರದಿ ಬಹಿರಂಗವಾಗದಿರಲು ಪ್ರಭಾವಿಗಳ ಕೈವಾಡ ಯಾವ ಪ್ರಮಾಣದಲ್ಲಿ ಇರಬೇಕು?' ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ವಾದ ಮಾಡಿದ ರಾಜ್ಯ ಅಡ್ವೋಕೇಟ್‌ ಜನರಲ್‌ ಎಸ್‌. ವಿಜಯ ಶಂಕರ ಅವರು, ಬಿದರಿ ನೇಮಕಾತಿ ರದ್ದುಗೊಳಿಸಿದ ಸಿಎಟಿ ಹೊಸ DG-IGP ನೇಮಕ ಮಾಡುವವರಗೆ ಹಂಗಾಮಿ DG-IGPಯಾಗಿ ಡಿಜಿಪಿ ಎರ್‌.ಆರ್‌. ಇನ್‌ಫ್ಯಾಂಟ್‌ ಅವರನ್ನು ನೇಮಿಸುವಂತೆ ಆದೇಶಿಸಿದೆ. ತನ್ಮೂಲಕ ಸಿಎಟಿ ತನ್ನ ವ್ಯಾಪ್ತಿ ಮೀರಿ ಆದೇಶ ನೀಡಿದೆ ಎಂದು ವಾದಿಸಿದರು.

ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+