ಜನರ ಕಿರಿಕಿರಿ ಸಹಿಸಲಾರದೆ ರೆಸಾರ್ಟ್ ಗೆ ಬಂದೆ, ಸಚಿವ ಬೆಳಮಗಿ
ಬೆಂಗಳೂರು,
ಮಾ 19: ವೋಟು ಹಾಕಿ ಗೆಲ್ಲಿಸಿದ ಮತದಾರರ ಅಹವಾಲು ಕೇಳಲು ಸಚಿವರಿಗೆ ಕಿರಿಕಿರಿ ಆಯಿತೆ? ಜನರ ಕಿರಿಕಿರಿ ಸಹಿಸಲಾರದೆ ರಿಸಾರ್ಟ್ ಗೆ ಬಂದೆ ಎಂದು ಪಶುಸಂಗೋಪನಾ ಸಚಿವ ರೇವೂನಾಯಕ್ ಬೆಳಮಗಿ ಹೇಳಿಕೆ ನೀಡಿದ್ದಾರೆ. id="toptextpromo">ಕಚೇರಿಯಲ್ಲಿ,
ಮನೆಯಲ್ಲಿದ್ದರೆ ಜನರ ಕಿರಿಕಿರಿ ನನ್ನಿಂದ ಸಹಿಸಲಾಗುತ್ತಿಲ್ಲ. ಬರಗಾಲ, ವಿದ್ಯುತ್, ನೀರಿಲ್ಲ ಎಂದು ಸಮಸ್ಯೆ ಹೇಳಿಕೊಂಡು ನನ್ನಲ್ಲಿ ಬರುತ್ತಾರೆ. ಅದನ್ನು ಕೇಳಿ ಕೇಳಿ ಸಾಕಾಗಿ ಹೋಗಿ, ಕಿರಿಕಿರಿ ಆಗಿ ರಿಸಾರ್ಟ್ ಗೆ ಬಂದಿದ್ದೇನೆ ಎಂದು ಹಿರಿಯರೂ ಆಗಿರುವ ರೇವೂನಾಯಕ್ ಬೆಳಮಗಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬರಗಾಲ,
ವಿದ್ಯುತ್, ನೀರಿನ ಸಮಸ್ಯೆ ಬಂದರೆ ಜನರು ಸಚಿವರ ಬಳಿ ಹೋಗದೆ ಇನ್ಯಾರ ಬಳಿ ಹೋಗಲಾಗುತ್ತೆ? ಅವರ ಮೇಲೆ ವಿಶ್ವಾಸವಿಟ್ಟು ವೋಟು ಹಾಕಿದರೆ ಸಚಿವರಿಂದ ಇಂತಹ ಉತ್ತರ ಸರಿಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. [ಗೋಲ್ಡನ್ ಪಾಮ್ಸ್ ರೆಸಾರ್ಟ್]











Click it and Unblock the Notifications