ಬಿಜೆಪಿಯಿಂದ ಸಿಎಂ ಕಾರ್ಯದರ್ಶಿ ಪುಟ್ಟಸ್ವಾಮಿ ಉಚ್ಚಾಟನೆ
ಬೆಂಗಳೂರು,
ಮಾ 19: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಯಡಿಯೂರಪ್ಪ ಅವರ ಬಲಗೈ ಬಂಟ ಬಿ ಜಿ ಪುಟ್ಟಸ್ವಾಮಿ ಅವರನ್ನು ಭಾರತೀಯ ಜನತಾಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಪಕ್ಷಾಧ್ಯಕ್ಷ ಈಶ್ವರಪ್ಪ ಈ ಸಂಬಂಧ ಅಧಿಕೃತ ಹೇಳಿಕೆ ನೀಡಿದ್ದಾರೆ. id="toptextpromo">ಬಿಜೆಪಿಯಿಂದ
ಅಲ್ಲದೇ ಹಿಂದುಳಿದ ವರ್ಗದ ವಿಶೇಷ ಆಹ್ವಾನಿತ ಸದಸ್ಯತ್ವದಿಂದಲೂ ವಜಾ ಮಾಡಲಾಗಿದೆ. ಪುಟ್ಟಸ್ವಾಮಿ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಲ್ಲ. ಬಸವರಾಜ ಪಾಟೀಲ್ ಸೇಡಂ ಹಾಗೂ ರಾಮಕೃಷ್ಣ ಮಾತ್ರ ಪಕ್ಷದ ಅಭ್ಯರ್ಥಿಗಳು ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪುಟ್ಟಸ್ವಾಮಿ
ಅವರ ನಾಮಪತ್ರಕ್ಕೆ ಬೆಂಬಲವಾಗಿ ಸಹಿ ಹಾಕಿದ ಹತ್ತು ಜನ ಬಿಜೆಪಿ ಶಾಸಕರಿಗೂ ನೋಟೀಸ್ ಜಾರಿ ಮಾಡಲಾಗಿದೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಸೋಮವಾರ ( ಮಾ 19) ವಿಧಾನಸೌಧಕ್ಕೆ ಏಕಾಂಗಿಯಾಗಿ ಬಂದ ಪುಟ್ಟಸ್ವಾಮಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿ ಬಿಜೆಪಿಗೆ ಇರುಸು ಮುರುಸು ಉಂಟು ಮಾಡಿದ್ದರು.











Click it and Unblock the Notifications