ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಬೇನಾಮಿ ಕಂಪನಿ ಸೃಷ್ಟಿ, ಕೋಟಿಗಟ್ಟಲೆ ಗಳಿಕೆ ಹೀಗೆ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  YS Jagan Mohan Reddy
  ಹೈದರಾಬಾದ್, ಜ.10: ನಿಜವಾಗಲೂ ಜಗನ್ ಮೋಹನ್ ರೆಡ್ಡಿ ಹೊಂದಿರುವ ಆಸ್ತಿ ಮೊತ್ತವಾಗಲಿ, ಬೇನಾಮಿ ಕಂಪನಿಗಳ ಬಗ್ಗೆಯಾಗಲಿ ಸ್ವತಃ ಸಿಬಿಐ ಸಂಸ್ಥೆ ಕೂಡಾ ಗೊಂದಲದಲ್ಲಿದೆ. 43,000 ಕೋಟಿ ರು ಆಸ್ತಿ ಎನ್ನುವುದು ಒಂದು ಅಂದಾಜು ಲೆಕ್ಕ ಮಾತ್ರ. ನಿಜವಾದ ಲೆಕ್ಕ ಇನ್ನೂ ಸಿಕ್ಕಿಲ್ಲ.

  ಸಿಕ್ಕಿರುವ ಮಾಹಿತಿ ಪ್ರಕಾರ ಬೇನಾಮಿ ಕಂಪನಿ ಸೃಷ್ಟಿಸಿ ಜಗನ್ ದುಡ್ಡು ಕಳಿಸಿದ್ದು ಹೇಗೆ ಎಂಬುದನ್ನು ಮಾತ್ರ ನಿರೂಪಿಸಬಹುದು.

  * 2001ರಲ್ಲಿ ಎಂಬಿ ಘೋರ್ಪಡೆ ಅವರ ಕೈಗೆ 53.51 ಕೋಟಿ ರು ಇತ್ತು ಸಂಡೂರ್ ಪವರ್ ಕಾರ್ಪೋರೇಷನ್ ಲಿ. ಸಂಸ್ಥೆಯನ್ನು ಜಗನ್ ತನ್ನದಾಗಿಸಿಕೊಂಡ.
  * 2005ರಲ್ಲಿ ಎಸ್ ಪಿಸಿಲ್ ನ ಶೇ32.79 ಷೇರುಗಳನ್ನು ಮಾರಿಷಸ್ ಮೂಲದ 2ಐ ಕ್ಯಾಪಿಟಲ್ ಹಾಗೂ ಪ್ಲೂರಿ ಎಮರ್ಜಿಂಗ್ ಕಂಪನಿಗೆ ಮಾರಾಟ ಮಾಡಿ 124.60 ಕೊಟಿ ರು ಎತ್ತಿದ.
  * ಈ ಮಾರಾಟದ ಸಂದರ್ಭದಲ್ಲಿ 2ಐ ಕ್ಯಾಪಿಟಲ್ ನ ನಿರ್ದೇಶಕನಾಗಿದ್ದ ಸಾಯಿ ರೆಡ್ಡಿಯನ್ನು ಕರೆತಂದೌ ಎಸ್ ಪಿಸಿಲ್ ನ ನಿರ್ದೇಶಕ ಹುದ್ದೆ ನೀಡಲಾಯಿತು. 2007-08ರ ಅವಧಿಯ ದಾಖಲೆ ಹೆಕ್ಕಿರುವ ಸಿಬಿಐ ಇದನ್ನು ಸ್ಪಷ್ಟಪಡಿಸಿದೆ.
  * ನಂತರ ಎಸ್ ಪಿಸಿಎಲ್ ನ 82 ಲಕ್ಷ ಷೇರುಗಳನ್ನು 18.75 ರು ಮೌಲ್ಯದಂತೆ ಐದು ಕಂಪನಿಗಳಿಗೆ ಜಗನ್ ಮಾರಿಬಿಟ್ಟ.
  * ಸಾಯಿ ಸೂರ್ಯ ವೇರ್ ಹೌಸ್ ಕಂಪನಿ ಲಿ, ಎಕ್ಸೆಲ್ ಪ್ರೊಸಾಫ್ಟ್ ಲಿ, ಸಿಗ್ಮಾ ಆಕ್ಸಿಜನ್ ಲಿ, ನೆಲ್ ಕಾಸ್ಟ್ ಫೈನಾನ್ಸ್ ಲಿ ಹಾಗೂ ಜಡ್ ಎಂ ಇನ್ಫೋಟೆಕ್ ಲಿ ಎಂಬ ಕಂಪನಿಗಳು ಷೇರು ಪಡೆದುಕೊಂಡಿದೆ.

  ಬೋಗಸ್ ಕಂಪನಿಗಳಿಗೆ ನಾಂದಿ: ನಂತರ ಈ ಐದೂ ಬೇನಾಮಿ ಕಂಪನಿಗಳನ್ನು ವಿಲೀನಗೊಳಿಸಿ ವಿಜಯ್ ಸಾಯಿ ರೆಡ್ಡಿ ಸಾರಥ್ಯದ ಕೀಲವ್ನ್ ಟೆಕ್ನಾಲಜೀಸ್ ಲಿ ಸಂಸ್ಥೆಗೆ ಸೇರಿಸಿಬಿಟ್ಟ. ಆಮೇಲೆ ಈ ಕಂಪನಿ ಜಗನ್ ಅಧಿಪತ್ಯಕ್ಕೆ ಸಿಕ್ಕಿತು ಎಂಬುದು ನಿರೀಕ್ಷಿತ.

  * ಐದು ಕಂಪನಿಗಳ ಬಂಡವಾಳ ಹೂಡಿಕೆದಾರರು ಬೋಗಸ್ ಎಂಬುದು ಸಿಬಿಐಗೆ ಈಗಷ್ಟೇ ತಿಳಿದು ಬಂದಿದೆ. ಆದರೆ, ಚಾಣಾಕ್ಷ ವಿಜಯ ಸಾಯಿ ರೆಡ್ಡಿ, ಐದು ಕಂಪನಿಗಳಲ್ಲಿ ಹಣ ಹೂಡಿಕೆದಾರರನ್ನು ಸೃಷ್ಟಿಸಿ ಎಲ್ಲವೂ ಕಾನೂನು ಪ್ರಕಾರ ನಡೆದಿದೆ ಎಂದು ದಾಖಲೆಗಳನ್ನು ತಯಾರಿಸಿಟ್ಟಿದ್ದ.

  ಮತ್ತೆ ಹೊಸ ನಕಲಿ ಕಂಪನಿಗಳು: ಸಂಡೂರ್ ಪವರ್ ನಿಂದ ಮತ್ತೆ ನಾಲ್ಕು ಸಬ್ಸಿಡಿ ಕಂಪನಿಗಳನ್ನು ಜಗನ್ ಹುಟ್ಟು ಹಾಕಿದ. ಕಾರ್ಮೆಲ್ ಏಶ್ಯಾ ಹೋಲ್ಡಿಂಗ್ ಪ್ರೈ.ಲಿ, ಸಿಲಿಕಾನ್ ಇನ್ಫ್ರಾಸ್ಟಕ್ಚರ್ ಪ್ರೈ ಲಿ, ಕೃಷ್ಣ ಪವರ್ ಟೆಕ್ನಾಲಜೀಸ್ ಲಿ ಹಾಗೂ ಭಗವತ್ ಸನ್ನಿಧಿ ಎಸ್ಟೇಟ್ಸ್ ಪ್ರೈ ಲಿ ಎಂಬ ಕಂಪನಿಗಳ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಲ್ಲವೂ ಸಾಯಿ ರೆಡ್ಡಿ ಕೈಲಿತ್ತು.

  * ನಂತರ ಕಾರ್ಮೆಲ್ ಏಷ್ಯಾ ಸಂಸ್ಥೆ ಅಧೀನದಲ್ಲಿ ಜಗತಿ ಪಬ್ಲಿಕೇಷನ್ ಪ್ರೈ ಲಿ ಹಾಗೂ ಇಂದಿರಾ ಟೆಲಿವಿಷನ್ ಸಂಸ್ಥೆ ಆರಂಭವಾಯಿತು. ಇದರಡಿಯಲ್ಲಿ ಸಾಕ್ಷಿ ಡೈಲಿ ಹಾಗೂ ಸಾಕ್ಷಿ ಟಿವಿ ಚಾಹಿನಿ 2008ರಲ್ಲಿ ಆರಂಭವಾಯಿತು.

  * ವಿಜಯ್ ಸಾಯಿ ರೆಡ್ಡಿ ಇಲ್ಲೂ ಕೈಚಳಕ ತೋರಿಸಿ, ಈ ಕಂಪನಿಗಳ ಷೇರುಗಳು 350 ರು ಪ್ರತಿ ಷೇರಿಗೆ ಮಾರಾಟವಾಗುವಂತೆ ನೋಡಿಕೊಂಡ. ಅಪಾರ ಬಂಡವಾಳ ಹರಿದು ಬಂದಿತು. ಅನೇಕ ಸೂಟ್ ಕೇಸ್ ಕಂಪನಿಗಳು, ಲಂಚಾವತಾರಕ್ಕೆ ನಾಂದಿ ಹಾಡುವ ಮೂಲಕ ಜಗನ್ ಆರ್ಥಿಕ ಸಾಮ್ರಾಜ್ಯವನ್ನು ಸಾಯಿ ರೆಡ್ಡಿ ಹಿಗ್ಗಿಸತೊಡಗಿದ.

  ಒಟ್ಟಿನಲ್ಲಿ ಬೇನಾಮಿ ಕಂಪನಿಗಳನ್ನು ಯಾವಾಗ ಸೃಷ್ಟಿಸಬೇಕು ಯಾವಾಗ ದಫನ್ ಮಾಡಬೇಕು ಎಂಬ ಸೂಕ್ಷ್ಮ ಸಂಗತಿ ಈ ಇಬ್ಬರಿಗೂ ಕರಗತವಾಗಿತ್ತು. ಆದರೆ, ಲಕ್ಸಂಬರ್ಗ್ ಕಂಪನಿ ವಿಷಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದ ಪರಿಣಾಮ ಈಗ ಜಗನ್ ಮೇಲೂ ಸಿಬಿಐ ಕತ್ತಿ ಝಳಪಿಸತೊಡಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  YSR Congress party president Y. S. Jagan Mohan Reddy fears detention in disproportionate assets case..CBI probing the alleged Rs.43,000 crore against him has reportedly amased to found how Jagan and his auditor Vijay Sai reddy created Fake firms companies accounts to enrich the Jagan's kingdom.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more