ನನ್ನನ್ನು ಜೈಲಿಗೆ ಕಳಿಸಿದ್ದೇ ಈಶ್ವರಪ್ಪ: ಬಿ.ಎಸ್. ಯಡಿಯೂರಪ್ಪ

ks-eshwarappa-sent-me-to-jail-bsy
ಬೆಂಗಳೂರು, ಡಿ. 29: ದೆಹಲಿಯಲ್ಲಿ ಬಿಜೆಪಿ ವರಿಷ್ಠರು ತಮ್ಮ ಮಾತಿಗೆ ಸೊಪ್ಪು ಹಾಕಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ. ಇದರೊಂದಿಗೆ ಬಿಜೆಪಿ ನಾಯಕತ್ವದ ಒಳಜಗಳ ನಿರ್ಣಾಯಕ ಹಂತಕ್ಕೆ ತಲುಪಿದೆ.

ನನ್ನನ್ನು ಜೈಲಿಗೆ ಕಳಿಸಿದ್ದೇ ಈಶ್ವರಪ್ಪ. ಆದರೂ ಅವರಿಗೆ ತೃಪ್ತಿ ತಂದಿಲ್ಲ. ನನ್ನನ್ನು ಈಗಲೂ ಅರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಇದೇ ಈಶ್ವರಪ್ಪ ಎಂದು ಯಡಿಯೂರಪ್ಪ ಕಡಿಕಿಡಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ 'ಯಡಿಯೂರಪ್ಪ ಹೇಳಿಕೆ ಿನ್ನೂ ನನ್ನ ಗಮನಕ್ಕೆ ಬಂದಿಲ್ಲ' ಎಂದು ಕೆಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

'ಇನ್ಮುಂದೆ ಬಿಜೆಪಿ ಅಂದರೆ ಈಶ್ವರಪ್ಪ ಮಾತ್ರ. ಪಕ್ಷಕ್ಕೆ ಯಾವುದೇ ವ್ಯಕ್ತಿ ಅನಿವಾರ್ಯವಲ್ಲ. ಜನವರಿ 15ರಿಂದ ರಾಜ್ಯ ಪ್ರವಾಸ ಮಾಡುವೆ' ಎನ್ನುವ ಮೂಲಕ ಯಡಿಯೂರಪ್ಪ ಅವರು ಪಕ್ಷದಿಂದ ಹೊರನಡೆಯುವ ಸುಳಿವು ನೀಡಿದ್ದಾರೆ.

'ಈಶ್ವರಪ್ಪ ನನ್ನ ವಿರುದ್ಧ ಘಳಿಗೆಗೊಂದು ಹೇಳಿಕೆ ನೀಡುತ್ತಿದ್ದಾರೆ. ಅವರಿಂದ ನನ್ನನ್ನು ಪಕ್ಷದಿಂದ ಹೊರಹಾಕುವ ಹುನ್ನಾರ ನಡೆದಿದೆ. ಮುಂದೆ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ಇದು ಅವರ ಷಡ್ಯಂತ್ರವಾಗಿದೆ' ಎಂದು ಬೆಂಗಳೂರಿನಲ್ಲಿ ಸದಾನಂದಗೌಡರು ಗುರುವಾರ ಬೆಳಗ್ಗೆ ತಮ್ಮನ್ನು ಭೇಟಿಯಾದ ನಂತರ ಬಿ.ಎಸ್. ಯಡಿಯೂರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+