'ಪಿತೃ ವಾಕ್ಯ ಪರಿಪಾಲಕ' ಕುಮಾರ ಬಂಗಾರಪ್ಪ ಮಾಡಿದ ತಪ್ಪೇನು?

how-bangarappa-kumar-bangarappa-relation-strained
ಬೆಂಗಳೂರು, ಡಿ. 29: ರಾಜ್ಯ ಕಂಡ ಅಪರೂಪದ ರಾಜಕಾರಣಿ ಎಸ್. ಬಂಗಾರಪ್ಪನವರ ಚಿತೆ ಆರುವ ಮುನ್ನವೇ ಅವರಿಬ್ಬರ ಪುತ್ರರ ಮಧ್ಯೆ ವಿವಾದ, ವೈಮನಸ್ಯ ಮತ್ತೆ ಹೊಗೆಯಾಡುತ್ತಿದೆ. ಇಷ್ಟಕ್ಕೂ ಸಹೋದರರು ದಾಯಾದಿಗಳಾಗಿ ಮಾರ್ಪಡಲು ಮೂಲಕಾರಣವಾದರೂ ಏನು ಎಂದು ಬೂದಿ ಕೆದಕಿದಾಗ... ಕೌಟುಂಬಿಕವಾಗಿ ಏನೆಲ್ಲ ನಡೆದಿದೆಯೋ ಬಾಹ್ಯ ಜಗತ್ತಿಗೆ ನಿಖರವಾಗಿ ತಿಳದಿಲ್ಲ. ಆದರೆ ರಾಜಕೀಯವಾಗಿ ಇವರ ತಪ್ಪು ನಡೆಗಳೇನು ಎಂಬುದನ್ನು ಅವಲೋಕಿಸಿದಾಗ...

ದಶಕದ ಹಿಂದೆ ಬಂಗಾರಪ್ಪ ಅವರು ಬಿಜೆಪಿ ಅಪ್ಪಿಕೊಂಡಾಗ ಕಾಂಗ್ರೆಸ್ ಶಾಸಕರಾಗಿದ್ದ ಕುಮಾರ್ ಬಂಗಾರಪ್ಪ ಸಹ ಬಿಜೆಪಿಗೆ ಸೇರ್ಪಡೆಗೊಂಡರು. ಆದರೆ ಕುಮಾರ ಬಂಗಾರಪ್ಪ ಕೆಲವೇ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಗೆ ಬಂದುಬಿಟ್ಟರು. ಅಲ್ಲಿಂದ ತಂದೆ-ಮಗನ ಬಾಂಧವ್ಯ ಸುಂಟರಗಾಳಿಗೆ ಸಿಕ್ಕಿತು. ಬಂಗಾರಪ್ಪ ಮರಣಾನಂತರವೂ ಅದು ಶಾಂತವಾಗುವ ಲಕ್ಷಣಗಳಿಲ್ಲ.

ಕುಮಾರನಿಂದ ವಿಮುಖರಾದ ಬಂಗಾರಪ್ಪ, ಮಧು ಬಂಗಾರಪ್ಪ ಅವರ ಕೈಹಿಡಿದು ರಾಜಕೀಯವಾಗಿ ಅವರನ್ನು ಬೆಳೆಸತೊಡಗಿದರು. ಇಬ್ಬರು ಸಹೋದರರು ಸೊರಬ ಕ್ಷೇತ್ರದಲ್ಲಿ ತೊಡೆತಟ್ಟಿ ಚುನಾವಣೆಗೆ ನಿಂತರು.

ಇಬ್ಬರ ಜಗಳದಲ್ಲಿ ಮೂರನೆಯವರರಿಗೆ ಲಾಭ ಎಂಬಂತೆ ಬಂಗಾರಪ್ಪ ಅವರ ಒಂದು ಕಾಲದ ಶಿಷ್ಯ ಹರತಾಳು ಹಾಲಪ್ಪ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು. (ಗುರುವಿಗೆ ತಿರುಮಂತ್ರ ಹೇಳಿದ ಕಾರಣಕ್ಕಾಗಿ ಕುಮಾರ ಬಂಗಾರಪ್ಪ ಅವರಂತೆ ಹಾಲಪ್ಪ ಅವರನ್ನೂ ಸಮಾಧಿ ಸ್ಥಳದತ್ತ ಬಿಟ್ಟುಕೊಳ್ಳಲಿಲ್ಲ ಎಂಬುದು ಗಮನಾರ್ಹ)

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಂಗಾರಪ್ಪ ಅವರು ಕಾಂಗ್ರೆಸ್ ನಿಂದ ಚುನಾವಣೆಗೆ ನಿಂತಾಗ ಕುಮಾರ್ ಬಂಗಾರಪ್ಪ ಒಂದಷ್ಟು ಸಮೀಪ ಬಂದಿದ್ದರು. ಆದರೆ ಮತ್ತೆ ದೂರವಾಗಿದ್ದರು. ಇವರಿಬ್ಬರ ಸಂಬಂಧ ಮತ್ತೆ ಮತ್ತೆ ಹಳಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+