ಯಡಿಯೂರಪ್ಪ ರಾಜಕೀಯ ಅವಸಾನ ಸನ್ನಿಹಿತ

bsy-political-career-will-end-shortly-yatnal
ಬೆಂಗಳೂರು, ಡಿ. 21: ನಾಳೆ ನಡೆಯಲಿರುವ ಮೇಲ್ಮನೆ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿಯನ್ನು ಶತಾಯಗತಾಯ ಗೆಲ್ಲಿಸಿ, ಮುಂದಿನ ವರ್ಷದ ವೇಳೆಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಿನಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಜೆಡಿಎಸ್ ಕಡೆಯಿಂದ ಆತಂಕಕಾರಿ ಮಾತು ಕೇಳಿಬಂದಿದೆ.

'ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನ ಇನ್ನು ಮೂರು ತಿಂಗಳಲ್ಲಿ ಅಂತ್ಯವಾಗುತ್ತದೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಳ್ಳುವುದು ವ್ಯರ್ಥ' ಎಂದು ಭವಿಷ್ಯ ನುಡಿದಿದ್ದಾರೆ ಯಡಿಯೂರಪ್ಪ ಅವರ ಕಡುವೈರಿ, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ್.

'ಯಡಿಯೂರಪ್ಪ ಅವರು ವಾಜಪೇಯ ಯಾಗದಲ್ಲಿ ಭಾಗವಹಿಸುವ ಬದಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರೆ ಸಾಕಿತ್ತು. ಒಮ್ಮೆ ಯಜ್ಞ, ಇನ್ನೊಮ್ಮೆ ವಾಮಾಚಾರ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆಳೆಯಬಾರದು' ಎಂದು ಯತ್ನಾಳ್ ಟೀಕಿಸಿದರು.

ತೆನೆ ಹೊತ್ತ ನಾಯಕರ ತಲೆಗೆ ಜಿಲ್ಲಾ ಉಸ್ತುವಾರಿ: ಜೆಡಿಎಸ್ ಗುಲ್ಬರ್ಗ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಶಾಸಕ ಸುಭಾಷ್ ಗುತ್ತೇದಾರ್, ಮಹಾಪ್ರಧಾನ ಕಾರ್ಯದರ್ಶಿಯಾಗಿ ದೇವೇಗೌಡ ತೆಲ್ಲೂರು ಅವರನ್ನು ನೇಮಕ ಮಾಡಲಾಗಿದೆ. ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಾಗನಗೌಡ ಕಂದಕೂರು, ಕಾರ್ಯಾಧ್ಯಕ್ಷರಾಗಿ ಶರಣಪ್ಪ ಸದ್ಲಾಪೂರ ಮತ್ತು ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಎ.ಸಿ. ಕಾಡ್ಲೂರು ಅವರು ನೇಮಕಗೊಂಡಿದ್ದಾರೆ.

ಎಂ.ಆರ್. ಹುಲಿನಾಯ್ಕರ್ ಅವರು ಪಕ್ಷದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮತ್ತು ಬಸವರಾಜ ಓಸಿಮಠ ಅವರು ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸಂಕ್ರಾಂತಿಯ ವೇಳೆಗೆ 120 ವಿಧಾನಸಭಾ ಸ್ಥಾನಗಳಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಯತ್ನಾಳ್ ಮಂಗಳವಾರ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+