ಸೋದರಿ ಕನ್ನಿ ಹೊರಕ್ಕೆ, ಸೋದರ ಸ್ಟಾಲಿನ್ ಒಳಕ್ಕೆ?

"ರಾಜಕೀಯ ದ್ವೇಷಕ್ಕೆ ನಾನು ಬಲಿಯಾಗುವುದಿಲ್ಲ. ನನ್ನ ಮೇಲೆ ಮಾಡಿರುವ ಆರೋಪ ಎಲ್ಲವೂ ಸುಳ್ಳು. ಧೈರ್ಯವಿದ್ದರೆ ನನ್ನನ್ನು ಪೊಲೀಸರು ಬಂಧಿಸಲಿ" ಎಂದು ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಸವಾಲು ಎಸೆದಿದ್ದಾರೆ.
ಚೆನ್ನೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಮಾಜಿ ಮೇಯರ್ ಎಂಕೆ ಸ್ಟಾಲಿನ್ ಹಾಗೂ ಅವರ ಪುತ್ರ ಉದಯನಿಧಿ ಹಾಗೂ ಇತರೆ ನಾಲ್ವರ ಮೇಲೆ FIR ದಾಖಲಿಸಿತ್ತು.
ನಗರದ ಪ್ರತಿಷ್ಠಿತ ಬಡಾವಣೆಯಲ್ಲಿನ ನಿವೇಶನವನ್ನು ಕಡಿಮೆ ದರಕ್ಕೆ ಪಡೆಯಲು ಯತ್ನಿಸಿದ್ದ ಕರುಣಾನಿಧಿ ಪುತ್ರ ಹಾಗೂ ಮೊಮ್ಮಗ, ನಿವೇಶನದ ಮಾಲೀಕರಿಗೆ ಕೊಲೆ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ.
ಎನ್ ಎಸ್ ಕುಮಾರ್ ಎಂಬುವವರು ನ.29ರಂದು ಸ್ಟಾಲಿನ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ತೇನಂಪೇಟ್ ಪ್ರದೇಶದ ಚಿತ್ತರಂಜನ್ ದಾಸ್ ರಸ್ತೆ ಬಳಿಯ ಸ್ವತ್ತನ್ನು ಬಲವಂತವಾಗಿ ಮಾರಾಟ ಮಾಡುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಹಾಲಿ ಮುಖ್ಯಮಂತ್ರಿ ಜಯಲಲಿತಾ ಅವರು ಕೂಡಾ ಅಕ್ರಮವಾಗಿ ಕೊಡನಾಡ್ ಹಾಗೂ ಶಿರುತ್ತವೂರ್ ನಲ್ಲಿ ಎರಡು ನಿವೇಶನಗಳನ್ನು ಹೊಂದಿದ್ದಾರೆ ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಸ್ಟಾಲಿನ್ ಪ್ರಶ್ನಿಸಿದ್ದಾರೆ.












Click it and Unblock the Notifications