ಲೋಕಾಯುಕ್ತ ಸಂಸ್ಥೆ ಮುಚ್ಚಲು ಸಕಾಲ: ಈಶ್ವರಪ್ಪ

ಭ್ರಷ್ಟಾಚಾರ ನಿರ್ಮೂಲನೆ ಮಾಡಲು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಹುಟ್ಟುಕೊಂಡ ಸಂಸ್ಥೆ ಲೋಕಾಯುಕ್ತದಲ್ಲಿ ಈಗ ಬರೀ ಕಳಂಕಿತರೇ ತುಂಬಿದ್ದಾರೆ. ನ್ಯಾಯ ಸಿಗುತ್ತದೆ ಎಂದು ನಂಬಿಕೊಂಡ ಬಂದ ಜನತೆಗೆ ಇವರು ರೀತಿ ಯಾವ ರೀತಿ ನ್ಯಾಯ ಒದಗಿಸಬಲ್ಲರು?
ಜನರ ನಂಬಿಕೆ ಕಳೆದುಕೊಂಡಿರುವ ಲೋಕಾಯುಕ್ತ ಸಂಸ್ಥೆ ಬಗ್ಗೆ ಕೇಂದ್ರ ಸರ್ಕಾರದ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುವ ಅಗತ್ಯತೆ ಎದ್ದು ಕಾಣುತ್ತಿದೆ. ಲೋಕಾಯುಕ್ತ ಸಂಸ್ಥೆ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರೆ, ಬೇಲಿಯೇ ಎದ್ದು ಹೊಲ ಮೇಯ್ದರೇ ಯಾರ ಬಳಿ ದೂರುವುದು.
ಬಳ್ಳಾರಿಯಲ್ಲಿ ಬಿಜೆಪಿಗೆ ಗೆಲುವು: ಗಾದಿ ಲಿಂಗಪ್ಪ ಅವರನ್ನು ಎಲ್ಲರೂ ಬೆಂಬಲಿಸಲಿದ್ದಾರೆ. ಶ್ರೀರಾಮುಲು ಜೊತೆ ಯಾರೂ ಗುರುತಿಸಿಕೊಂಡಿಲ್ಲ. ಜಿಲ್ಲೆ ಶಾಸಕರು ಗಾದಿ ಲಿಂಗಪ್ಪ ಪರ ಮತಯಾಚಿಸಲಿದ್ದಾರೆ. ಗೆಲ್ಲಲು ಬೇಕಾದ ಎಲ್ಲಾ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದರು.
ಶಿಕಾರಿಪುರದಲ್ಲಿ ಜೈಲಿನಿಂದ ಹೊರಬಂದ ಯಡಿಯೂರಪ್ಪ ಅವರಿಗೆ ಸನ್ಮಾನಿಸುವ ಕಾರ್ಯಕ್ರಮದ ಬಗ್ಗೆ ನನಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಉಪ ಚುನಾವಣೆ ಮುಗಿಯುವ ತನಕ ಬೇರೆ ಯಾವುದೇ ಕಾರ್ಯಕ್ರಮ ನಮ್ಮ ಪಟ್ಟಿಯಲ್ಲಿಲ್ಲ ಎಂದು ಈಶ್ವರಪ್ಪ ಕುಟುಕಿದರು. ಕೊನೆಗೆ ಯಡಿಯೂರಪ್ಪ ಅವರು ಬಳ್ಳಾರಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಬಂದೇ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications