ಗಾಲಿ ರೆಡ್ಡಿಗೆ ಮುಳುವಾದ ರಾಜಗೋಪಾಲ್ ಬಂಧನ

CBI to quiz VD Rajagopal

ಹೈದರಾಬಾದ್, ನ.13: ಅಕ್ರಮ ಗಣಿಗಾರಿಕೆ, ರಾಜಸ್ವ ವಂಚನೆ ಆರೋಪದಡಿಯಲ್ಲಿ ಚಂಚಲಗುಡ ಜೈಲು ಸೇರಿರುವ ಗಾಲಿ ಜನಾರ್ದನ ರೆಡ್ಡಿ ಮೈ ನಡುಕ ಇನ್ನಷ್ಟು ಹೆಚ್ಚಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿ ಆಂಧ್ರಪ್ರದೇಶದ ಗಣಿ ಇಲಾಖೆ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರನ್ನು ಶನಿವಾರ(ನ.12) ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ. ಸಿಬಿಐ ನ್ಯಾಯಾಲಯದ ಒಂದು ದಿನದ ಮಟ್ಟಿಗೆ ರಾಜ ಗೋಪಾಲ್ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿದೆ.

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಓಬಳಾಪುರಂ ಕಂಪನಿಗೆ ಅನಂತಪುರ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಲು ಬೇಕಾದ ಸೂಕ್ತ ವ್ಯವಸ್ಥೆ ಕಲ್ಪಿಸಿ ಲೈಸನ್ಸ್ ಒದಗಿಸಿಕೊಟ್ಟ ಆರೋಪ ರಾಜಗೋಪಾಲ್ ಅವರ ಮೇಲಿದೆ.

2005 ರಿಂದ 2010 ರ ತನಕ ಗಣಿ ನಿರ್ದೇಶಕರಾಗಿದ್ದ ರಾಜಗೋಪಾಲ್ ಅವರನ್ನು ಈ ಹಿಂದೆ ಕೂಡಾ ಸಿಬಿಐ ತಂಡ ಪ್ರಶ್ನೆಸಿತ್ತು. ಆದರೆ ಬಂಧಿಸಿ, ವಿಚಾರಣೆ ನಡೆಸಿರಲಿಲ್ಲ. ರಾಜಗೋಪಾಲ್ ಅವರ ಬಳಿ ರೆಡ್ಡಿ ಸೋದರರ ಅಕ್ರಮಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳಿದೆ ಎನ್ನಲಾಗಿದೆ.

ಈ ನಡುವೆ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿಎ ಶ್ರೀನಿವಾಸ ರೆಡ್ಡಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನ.15ರ ತನಕ ವಿಸ್ತರಿಸಲಾಗಿದೆ. ಓಬಳಾಪುರಂ ಕಂಪನಿ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಬ್ರಹ್ಮಣಿ ಸ್ಟೀಲ್ಸ್ ನ ಎಲ್ಲಾ ನಿರ್ದೇಶಕರನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+