ದಿಗ್ವಿಜಯ್ ಹೇಳಿಕೆಗೆ ಕುಟುಕಿದ ರವಿಶಂಕರ್ ಗುರೂಜಿ

Ravishankar Guruji
ಬೆಂಗಳೂರು, ಅ.28: ಸಂಘ ಪರಿವಾರದ ಕಾರ್ಯಕರ್ತರಿಗೆ ಉಗ್ರರ ಲಿಂಕ್ ಇದೆ ಎಂದು ಹೇಳಿ ನಂತರ ಉಲ್ಟಾ ಹೊಡೆದಿದ್ದ ಡೈಲಾಗ್ ಮಾಸ್ಟರ್ ದಿಗ್ವಿಜಯ್ ಸಿಂಗ್ ಈಗ ಹೊರ ಹಾಕಿರುವ 'ಎಬಿಸಿ' ಥಿಯರಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಆರೆಸ್ಸೆಸ್ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದೆ. ಇದನ್ನು ಸಾರ್ವಜನಿಕರಂದ ಮುಚ್ಚಿಡಲು ಎಬಿಸಿ ಥಿಯರಿ ಬಳಕೆ ಮಾಡಲಾಗಿದೆ.

"Plan A - Baba Ramdev. Crashed. Plan B- Anna. ? Plan C - Sri Sri Ravi Shankar soon to start his campaign." ಎಂದು ಟ್ವೀಟ್ ಮಾಡಿದ್ದರು.

ನಂತರ ಸುದ್ದಿಗೋಷ್ಠಿಯಲ್ಲಿ ಮೂರನೇ ಪ್ಲ್ಯಾನ್ ನಲ್ಲಿರುವ ಗುರೂಜಿ ಜಾಗರೂಕರಾಗಿರಬೇಕು ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರವಿಶಂಕರ್ ಗುರೂಜಿ, ದಿಗ್ವಿಜಯ್ ಅವರ ಎಲ್ಲಾ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸರ್ವಸ್ವತಂತ್ರರು ಎಂದು ಹೇಳಿದ್ದಾರೆ.

ಆದರೆ, ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಭ್ರಷ್ಟರ ವಿರುದ್ಧ ಹೋರಾಟಕ್ಕೆ ಕಾನೂನು ಮಾರ್ಗವಲ್ಲದೆ, ನೈತಿಕ ಮತ್ತು ಆಧ್ಯಾತ್ಮಿಕ ಮಾರ್ಗವೂ ಅಗತ್ಯ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.

ಈಗಾಗಲೇ 1 ಲಕ್ಷ ಜನರಿಗೆ ಲಂಚ ನೀಡದಂತೆ ಮತ್ತು ತೆಗೆದುಕೊಳ್ಳದಂತೆ ಶಪಥ ಬೋಧಿಸಿದ್ದೇನೆ. ದಿಗ್ವಿಜಯ ಸಿಂಗ್‌ ಕೂಡ ಆರ್ಟ್‌ ಆಫ್ ಲಿವಿಂಗ್‌ನ ಯೋಗ-ಧ್ಯಾನ ಶಿಬಿರಗಳಿಗೆ ಹಾಜರಾಗಿದ್ದವರು. ಈಗ ಮತ್ತೊಮ್ಮೆ ಕೋರ್ಸ್ ಗೆ ಸೇರಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+