ನಿರೀಕ್ಷೆಯಂತೆ ಉಪ ಲೋಕಾಯುಕ್ತ ನ್ಯಾ.ಗುರುರಾಜನ್ ರಾಜೀನಾಮೆ

ನ್ಯಾ. ಶಿವರಾಜ್ ವಿ ಪಾಟೀಲ್ ಅವರು ಗೃಹ ನಿರ್ಮಾಣ ಸಂಘದಿಂದ ನಿಯಮಬಾಹಿರ ನಿವೇಶನ ಪಡೆದುಕೊಂಡಿರುವ ಆರೋಪದ ಮೇಲೆ ಲೋಕಾಯುಕ್ತ ಸ್ಥಾನಕ್ಕೆರಾಜೀನಾಮೆ ನೀಡಿದ ಬೆನ್ನಲ್ಲೇ ಅಂತಹುದೇ ಆರೋಪದಲ್ಲಿ 2ನೇ ಉಪ ಲೋಕಾಯುಕ್ತ ನ್ಯಾ. ಗುರುರಾಜನ್ ಕೂಡ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು 'ಕನ್ನಡವನ್ಇಂಡಿಯಾ' ಅಂದೇ ಸಾರಿತ್ತು.
ಗಮನಾರ್ಹವೆಂದರೆ ಎರಡು ತಿಂಗಳ ಹಿಂದಷ್ಟೇ ರಾಜ್ಯದ ಎರಡನೇ ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದ ನ್ಯಾ. ಗುರುರಾಜನ್ ಅವರು ತಮ್ಮ ಮೇಲೆ ಗುರುತರ ಆರೋಪವಿದ್ದರೂ ರಾಜೀನಾಮೆ ನೀಡುವುದಕ್ಕೆ ಇಷ್ಟು ತಡಮಾಡಿದ್ದೇಕೆ ಎಂಬ ಪ್ರಶ್ನೆ ಕಾಡುತ್ತಿದೆ.
ಆದಾಗ್ಯೂ, ಬುಧವಾರ ಯಾವುದೇ ಮುನ್ಸೂಚನೆಗಳಿಲ್ಲದೆ, ಮಾಧ್ಯಮಗಳಿಗೂ ತಿಳಿಸದೆ ದಿಢೀರ್ ರಾಜೀನಾಮೆ ಕೊಟ್ಟಿದ್ದಾರೆ.












Click it and Unblock the Notifications