ಗೆಳೆಯ ರಾಮುಲುಗೆ ಕಲ್ಯಾಣಪತ್ರ ಬರೆದ ಜೈಲುಹಕ್ಕಿ ಜನಾ ರೆಡ್ಡಿ

reddy-letter-to-sriramulu-enquires-mass-marriage
ಗದಗ, ಅ.10: ತಮ್ಮ ಹಿತೈಷಿ ಜನಾರ್ದನ ರೆಡ್ಡಿ ಅನುಪಸ್ಥಿತಿಯಲ್ಲಿ ಈ ಬಾರಿಯ ವಾರ್ಷಿಕ ಸಾಮೂಹಿಕ ವಿವಾಹ ಮಹೋತ್ಸವ ನಡೆಸುತ್ತಿರುವುದಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಮನಸು ತುಂಬಾ ವ್ಯಾಕುಲಗೊಂಡಿದೆ. ಆದರೆ ಗೆಳೆಯ ಜನಾ ರೆಡ್ಡಿ ಪತ್ರ ಬರೆದು ಮದುವೆ ಶುಭಾಶಯ ಕೋರಿರುವುದು ಶ್ರೀರಾಮುಲುಗೆ ತುಸು ಸಮಾಧಾನ ತಂದಿದೆ.

'12 ವರ್ಷಗಳಿಂದ ನಡೆಸುತ್ತಾ ಬಂದಿರುವ ಸಾಮೂಹಿಕ ವಿವಾಹ ಈಗಾಗಲೇ ಲಿಮ್ಕಾ ದಾಖಲೆಗೆ ಸೇರ್ಪಡೆಗೊಂಡಿದೆ. ಈ ಸಲ ಗದಗನಲ್ಲಿ ಐದನೇ ವರ್ಷದ ಸಾಮೂಹಿಕ ವಿವಾಹ ನಡೆಸುತ್ತಿದ್ದು, ಗೆಳೆಯ ಜನಾರ್ದನರೆಡ್ಡಿ ಶುಭ ಕೋರಿ ಪತ್ರ ಬರೆದಿದ್ದಾರೆ' ಎಂದು ಸ್ವತಃ ಶ್ರೀರಾಮುಲು ಅವರೇ ಹೇಳಿದರು.

ಗದಗದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಜರ್ನಾರ್ದರೆಡ್ಡಿ ಅವರು ಜೈಲಿನಲ್ಲಿದ್ದರೂ ತಮ್ಮ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ. ಅವರು ಬರೆದ ಪತ್ರದಲ್ಲಿ ತಮ್ಮ ಹೆಂಡತಿ ಮತ್ತು ಮಕ್ಕಳ ಬಗ್ಗೆ ಕೇಳಿಲ್ಲ. ಬಳ್ಳಾರಿ ಜಿಲ್ಲೆ ಹೇಗಿದೆ ಎಂದು ಕೇಳುವುದಿಲ್ಲ.

ಆದರೆ ನನ್ನ ಆತ್ಮೀಯ ಸ್ನೇಹಿತ ಬಿ. ಶ್ರೀರಾಮುಲು ಗದಗನಲ್ಲಿ ನಡೆಸುತ್ತಿರುವ ಈ ವರ್ಷದ ಸಾಮೂಹಿಕ ವಿವಾಹದ ತಯಾರಿ ಹೇಗಿದೆ?' ಎಂದು ಕೇಳಿರುವುದು ತಮ್ಮ ಮೇಲೆ ಅವರಿಗಿರುವ ಪ್ರೀತಿ-ವಿಶ್ವಾಸದ ಆಳವನ್ನು ತೋರಿಸುತ್ತದೆ ಎಂದರು.

ಜನಾರ್ದನ ರೆಡ್ಡಿ ಅವರನ್ನು ನೋಡಲು ಬಹಳಷ್ಟು ಜನ ಜೈಲಿಗೆ ತೆರಳುತ್ತಾರೆ. ಆದರೆ ತಾವು ಹೋಗುವುದಿಲ್ಲ. ಅವರನ್ನು ಆ ಸ್ಥಿತಿಯಲ್ಲಿ ನೋಡಲು ತಮ್ಮಿಂದಾಗದು ಎಂದು ಶ್ರೀರಾಮುಲು ಭಾವುಕರಾದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+