ಹುಬ್ಬಳ್ಳಿ ಚಾಲಕನಿಗೆ ಸ್ವಾಮೀಜಿ ಪೀಠದ ಆಸೆ

ಸ್ವಾಮೀಜಿಗಳ ಪೀಠಕ್ಕೇರಲು ಅವಕಾಶ ನೀಡಬೇಕು ಇಲ್ಲದಿದ್ದರೆ, ತನಗೆ ತಿರುಗಾಡಲು ಕಾರು ಹಾಗೂ 10 ಲಕ್ಷ ರೂಪಾಯಿ, ಜೀವನಾಂಶ ನೀಡಬೇಕೆಂದು ಪಟ್ಟು ಹಿಡಿದು ಕುಳಿತಿರುವುದು ಆಡಳಿತ ಮಂಡಳಿಗೆ ಅಚ್ಚರಿ ಮೂಡಿಸಿದೆ.
ನಾಗಶೆಟ್ಟಿ ಕೊಪ್ಪದಲ್ಲಿರುವ ಶಾಂಡಿಲ್ಯಾಶ್ರಮದ ಚಂದ್ರಶೇಖರ ಸ್ವಾಮಿ ಲಿಂಗೈಕ್ಯರಾಗಿದ್ದಾರೆ. ಆದರೆ, ಮಠಕ್ಕೆ ಈವರೆಗೂ ಯಾರನ್ನೂ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಲ್ಲ.
ಈ ಮಧ್ಯೆ ಚಂದ್ರಶೇಖರ ಸ್ವಾಮಿ ಕಾರು ಚಾಲಕನಾಗಿದ್ದ ಶಿವಾನಂದ, ನಾನು ಕಳೆದ 40 ವರ್ಷಗಳಿಂದ ಮಠದಲ್ಲಿ ಸೇವೆ ಸಲ್ಲಿಸಿದ್ದಾನೆ. ಈಗ ನನಗೆ ಮಠಾಧೀಶನಾಗೋ ಆಸೆ ಇದೆ ಎಂಬುದಾಗಿ ಹೇಳಿಕೊಂಡು ಆಡಳಿತ ಮಂಡಳಿಯನ್ನು ಬ್ಲಾಕ್‌ಮೇಲ್ ಮಾಡುವ ಮಟ್ಟಕ್ಕೆ ಹೋಗಿದ್ದಾನೆ.
ಚಂದ್ರಶೇಖರ ಸ್ವಾಮಿ ಮರಣಕ್ಕಿಂತ ಮೊದಲೇ ವಿಲ್ ಬರೆದಿಟ್ಟಿದ್ದಾರೆ. ಅದರಲ್ಲಿ 'ಮಠದ ಉತ್ತರಾಧಿಕಾರಿಯ ಆಯ್ಕೆ ಅಧಿಕಾರ ಆಡಳಿತ ಮಂಡಳಿಗೆ ಬಿಟ್ಟಿ ವಿಷಯ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಪೀಠಾಧಿಪತಿ ಇಲ್ಲದ ಮಠಕ್ಕೆ ನಾನೇ ದಿಕ್ಕು ಎಂದು ಶಿವಾನಂದ ಹೇಳಿಕೊಂಡು ತಿರುಗುತ್ತಿದ್ದಾನೆ.












Click it and Unblock the Notifications