ನಾನ್ಯಾರೆಂದು ತೋರಿಸ್ತೀನಿ: ಯಡಿಯೂರಪ್ಪ

ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರ ಯಡಿಯೂರಪ್ಪ ಅವರು ಮತಯಾಚನೆ ಮಾಡಿದರು. ಇಂದು ನನ್ನ ವಿರುದ್ಧ ಹಲವು ಕೇಸ್ ಗಳು ಕೋರ್ಟ್ ನಲ್ಲಿವೆ. ನಾನು ತಪ್ಪು ಮಾಡಿಲ್ಲ, ಒಂದು ವೇಳೆ ನಾನು ಜೈಲಿಗೆ ಹೋದರೂ ಜೈಲಿನಿಂದಲೇ ರಾಜಕೀಯ ಮಾಡುವ ತಾಕತ್ ನನಗಿದೆ. ಹೈ ಕಮಾಂಡ್ ಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಗುಡುಗಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಎಲ್ಲರೂ ಬೆಲೆ ಕೊಡಲೇಬೇಕು. ಕೋರ್ಟ್ ತೀರ್ಮಾನಕ್ಕೆ ತಲೆ ಬಾಗಲೇಬೇಕು. ನಾನು ತಪ್ಪಿತಸ್ಥ ಎಂದು ಕೋರ್ಟ್ ತೀರ್ಮಾನಿಸಿದರೆ ನಾನು ಜೈಲಿಗೆ ಹೋಗಲು ಸಿದ್ದ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕರಡಿ ಸಂಗಣ್ಣ, ಜೆಡಿಎಸ್ ನಿಂದ ಪ್ರದೀಪ್ ವಿರೂಪಾಕ್ಷ ಗೌಡ ಹಾಗೂ ಕಾಂಗ್ರೆಸ್ ನಿಂದ ಬಸವರಾಜ್ ಹಿತ್ನಾಳ್ ಸ್ಪರ್ಧಿಸಿದ್ದಾರೆ.
ಇವರ ಜೊತೆಗೆ ಇನ್ನೂ 14 ಮಂದಿ ಕಣದಲ್ಲಿದ್ದಾರೆ. ಸೆ.26 ರಂದು ಮತದಾನ ನಡೆಯಲಿದ್ದು, ಸೆ.29ರಂದು ಫಲಿತಾಂಶ ಹೊರಬರಲಿದೆ.












Click it and Unblock the Notifications