ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಹ ಪತ್ತೆ ಸಾಧನದಿಂದ ಬಂಗಾರದ ಶೋಧನೆ

By * ರೋಹಿಣಿ ಬಳ್ಳಾರಿ
|
Google Oneindia Kannada News

Janardhana Reddy
ಆಗ, ಮೆಟಲ್ ಡಿಟೆಕ್ಟರ್ ಶೌಚಾಲಯ, ಸ್ನಾನದಗೃಹಗಳತ್ತ ಹೋದಾಗ ಬಂಗಾರ ಇರುವುದು ಪತ್ತೆ ಮಾಡಿತು. ಕೂಡಲೇ ಚುರುಕಾದ ಅಧಿಕಾರಿಗಳ ತಂಡ ಮನೆಯ ಸದಸ್ಯರನ್ನು ಸ್ಥಳಕ್ಕೆ ಕರೆಯಿಸಿ ಬಂಗಾರವನ್ನು ಅಡಗಿಸಿ ಇರಿಸಿರುವ ಕುರಿತು ಮಾಹಿತಿ ಪಡೆದರು. ಅಲ್ಲದೇ, ಸ್ನಾನದಗೃಹದಲ್ಲಿ ಅಲಂಕಾರಕ್ಕಾಗಿ, ಶೌಚಾಲಯದಲ್ಲಿ ಭದ್ರತೆಗಾಗಿ ಇರಿಸಿರುವ ಬಂಗಾರದ ಮಾಹಿತಿ ತಿಳಿದು ದಂಗಾದರು.

ಬುಧವಾರ ಮಧ್ಯಾಹ್ನದ ವೇಳೆಗೆ ಈ ಮಾಹಿತಿ ಖಚಿತವಾಗುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಆದಾಯ ತೆರಿಗೆ ಅಧಿಕಾರಿಗಳನ್ನು ಕರೆಯಿಸಿ ಅವರ ಸಮ್ಮುಖದಲ್ಲೇ ಬಂಗಾರವನ್ನು ಹೊರ ತೆಗೆಯಲು ಮುಂದಾದರು. ಆಗ, ಒಟ್ಟು ಕನಿಷ್ಟ 30 ಕೆಜಿ ಬಂಗಾರ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ಮೂಲಗಳು ಖಚಿತಪಡಿಸಿವೆ.

ವಿದೇಶಿ ವಸ್ತುಗಳ ಮೂಲಕವೇ ಜನಾರ್ದನರೆಡ್ಡಿ ಅವರ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಾಣವಾಗಿದ್ದು ಇವುಗಳ ಒಟ್ಟು ವೆಚ್ಚವೇ ಕೆಲ ಕೋಟಿಗಳನ್ನು ಮೀರಿಸುವಂಥಹದ್ದು. ಕುಟುಂಬದ ಸದಸ್ಯರು ಮತ್ತು ಮನೆಯ ವಿಶ್ವಾಸಾರ್ಹ - ನಂಬಿಕೆಸ್ಥ ನೌಕರರು ಮಾತ್ರ ಈ ಕೋಣೆಗಳ ಪ್ರವೇಶಕ್ಕೆ ಅರ್ಹರು.

ಸಿಬಿಐ ಅಧಿಕಾರಿಗಳ ಶೋಧ ಕಾರ್ಯ ಬುಧವಾರ ರಾತ್ರಿ 8 ಗಂಟೆ ನಂತರವೂ ಮುಂದುವರೆದಿದೆ. ಸಿಬಿಐ ತಂಡದ ಜೊತೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇದ್ದು ಸಿಕ್ಕ ಬಂಗಾರದ ಮೌಲ್ಯ ನಿಗದಿ ಮಾಡುವ, ಆದಾಯ ತೆರಿಗೆ ಪಾವತಿಸುವ ಪಟ್ಟಿಯಲ್ಲಿ ಸಿಕ್ಕಿರುವ ಬಂಗಾರಕ್ಕೆ ತೆರಿಗೆ ಪಾವತಿ ಆಗಿರುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ರೆಡ್ಡಿ ಪತ್ನಿಯ ಬಂಧನ? : ಜನಾರ್ದನರೆಡ್ಡಿಯ ಪತ್ನಿ ಲಕ್ಷ್ಮಿ ಅರುಣ ಅವರನ್ನು ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ಬಂಧಿಸಿ, ಹೈದರಾಬಾದ್‌ನ ಸಿಬಿಐ ಕೋರ್ಟ್‌ಗೆ ಒಪ್ಪಿಸಲಿದ್ದಾರೆ ಎನ್ನುವ ದಟ್ಟವಾದ ವದಂತಿಗಳು ಇರುವ ಹಿನ್ನೆಲೆಯಲ್ಲಿ ರೆಡ್ಡಿಯ ಮನೆಯ ಮುಂದೆ ಮಾಧ್ಯಮ ಪ್ರತಿನಿಧಿಗಳು ಬುಧವಾರ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದಾರೆ.

English summary
CBI sleuths are still searching Janardhana Reddy's residence in Bellary to detect more treasure. Metal detectors have been used by CBI officials to unearth the hidden treasure. It is also believed that Janardhana Reddy's wife Aruna Reddy too fearting arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X