ಜನಾರ್ದನ ರೆಡ್ಡಿ ಬಂಗಾರವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತೆ?
ಬಳ್ಳಾರಿ,
ಸೆ. 7 : ಸಿಬಿಐನಿಂದ ಬಂಧನಕ್ಕೊಳಗಾಗಿ ಆಂಧ್ರದ ಚಂಚಲಗುಡ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ದಿನತಳ್ಳುತ್ತಿರುವ ಎಂಎಲ್ಸಿ ಜಿ. ಜನಾರ್ದನ ರೆಡ್ಡಿಯ ಮನೆಯಲ್ಲಿ ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಕೂಡ ಶೋಧ ಮುಂದುವರೆಸಿದ್ದಾರೆ. ಬುಧವಾರ ಮೆಟಲ್ ಡಿಟೆಕ್ಟರ್‌ಗಳನ್ನು ಬಳಕೆ ಮಾಡಿ ಬಂಗಾರ, ಪ್ಲಾಟಿನಂ ಮತ್ತು ಬೆಳ್ಳಿಯ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ. id="toptextpromo">ಅಧಿಕೃತ
ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳು ರೆಡ್ಡಿಯ ಮನೆಯ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಬಂಗಾರ, ನಗದು ಹಣ ಹಾಗೂ ಇನ್ನಿತರೆ ಮಾಹಿತಿಗಳನ್ನು ಅಡಗಿಸಿ ಇಡಲಾಗಿದೆ ಎನ್ನುವ ಮಾಹಿತಿಯನ್ನು ಆಧರಿಸಿ ಮಂಗಳವಾರ ನಡೆಸಿದ ಶೋಧ ಯಾವುದೇ ಫಲವನ್ನು ನೀಡಿರಲಿಲ್ಲ. ಆದ್ದರಿಂದ ಬುಧವಾರಕ್ಕೆ ಮೆಟಲ್ ಡಿಟೆಕ್ಟರ್ ಮೂಲಕವೇ ಮನೆಯಲ್ಲಿ ಶೋಧ ನಡೆಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಐಷಾರಾಮಿ
ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಸಕಲೈಶ್ವರ್ಯಗನ್ನು ಅನುಭವಿಸಿದ ಜನಾರ್ದನ ರೆಡ್ಡಿ, ವಾಸವಿರುವ ಮನೆಯಲ್ಲಿ ನೆಲಮಾಳಿಗೆ ಸಾಮಾನ್ಯರ ಕಣ್ಣಿಗೆ ಕಾಣುತ್ತಿಲ್ಲ. ಆದರೂ ಸಿಬಿಐ ಅಧಿಕಾರಿಗಳು ತಮಗೆ ದೊರೆತ ಮಾಹಿತಿಯನ್ನು ಆಧರಿಸಿ ತನಿಖೆಯನ್ನು ನಡೆಸಿ ಬಂಗಾರದ ಶೋಧ ನಡೆಸಿದ್ದರು. [ಮುಂದೆ ಓದಿ : ಬಂಗಾರದ ಮಾಹಿತಿ ತಿಳಿದು ದಂಗಾದ ಪೊಲೀಸರು]











Click it and Unblock the Notifications