ಬಿಎಸ್ ಯಡಿಯೂರಪ್ಪಗೆ ಹಿಡಿಶಾಪ ಹಾಕಿದ ಮಹಿಳೆ

ಅನಿರೀಕ್ಷಿತ ಘಟನೆಗೆ ಕೋರ್ಟ್ ಸಾಕ್ಷಿಯಾಯಿತು. ದೊರೆಸ್ವಾಮಿ ಒಡೆತನದ ಪಿಇಎಸ್ ಸಂಸ್ಥೆಗೆ ಇದೇ ಫೆಬ್ರವರಿಯಲ್ಲಿ ಗವಿಪುರ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಈ ನಿವೇಶನದ ಒಂದು ಸೈಟ್ ಈ ಮಹಿಳೆಯದ್ದು, ಆಕೆಯ ಹೆಸರಿನಲ್ಲೇ ಖಾತಾ ಕೂಡಾ ರಿಜಿಸ್ಟರ್ ಆಗಿತ್ತು.
ಬಿಡಿಎ ಆದೇಶ ಪ್ರಶ್ನಿಸಿ ಈಕೆ ಸಾರ್ವಜನಿಕ ಅರ್ಜಿ ದಾಖಲಿಸಿದ್ದರು. ದಾಖಲೆಗಳು ಈಕೆಯ ಪರವಾಗಿಯೇ ಇರುವುದರಿಂದ ಪಿಇಎಸ್ ಸಂಸ್ಥೆ ನಿವೇಶನವನ್ನು ಹಿಂದಿರುಗಿಸಿತ್ತು.
ಆದರೆ, ಪಿಇಎಸ್ ಸಂಸ್ಥೆಗೆ ನಿವೇಶನ ಹಂಚಿಕೆ ಮಾಡಿದಾಗ ಈಕೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ಈಕೆಯನ್ನು ಎರಡು ದಿಂದ ಜೈಲಿಗೆ ಅಟ್ಟಿದ್ದರು ಇದೇ ಈಕೆಯ ಕೋಪಕ್ಕೆ ತಾಪಕ್ಕೆ ಕಾರಣವೆನ್ನಲಾಗಿದೆ.
ಯಡಿಯೂರಪ್ಪ ಮತ್ತು ದೊರೆಸ್ವಾಮಿ ಯವರೇ ನನ್ನ ವಿರುದ್ದ ದೂರು ದಾಖಲಿಸಿ ಜೈಲಿಗೆ ಹೋಗುವಂತೆ ಮಾಡಿದರು ಎಂದು ಕೋರ್ಟ್ ಆವರಣದಲ್ಲಿ ರಂಪರಾಮಾಯಣ ನಡೆಸುತ್ತಿದ್ದಾಗ ಬೇಸತ್ತ ಪೊಲೀಸರು ಈಕೆಯನ್ನು ಕೋರ್ಟ್ ಹಾಲಿಗೆ ಕಳುಹಿಸಿದ್ದರು. ನ್ಯಾಯಾಧೀಶರ ಮುಂದೆ ಕೂಡಾ ತನ್ನ ನೋವನ್ನು ಈಕೆ ನಿವೇದಿಸಿಕೊಂಡಳು.












Click it and Unblock the Notifications