ಅಣ್ಣಾಗೆ ರಾಹುಲ್ ಗಾಂಧಿ ಅಭಿನಂದನೆ *ಕಂಡೀಷನ್ಸ್ ಅಪ್ಲೈ

ಜನ ಲೋಕಾಪಾಲದಿಂದ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಭ್ರಷ್ಟಾಚಾರ ತೊಲಗಿಸಲು ಯಾವುದೇ ಸರಳ ಸಿದ್ಧಸೂತ್ರಗಳಿಲ್ಲ. ಭ್ರಷ್ಟಾಚಾರದಂಥ ಬೃಹತ್ ಸಮಸ್ಯೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದ ಅಣ್ಣಾ ಹಜಾರೆ ಅವರಿಗೆ ರಾಹುಲ್ ಧನ್ಯವಾದ ಅರ್ಪಿಸಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ನಿರಶನ ನಿಲ್ಲಿಸದಿರುವುದು ಕಳವಳಕಾರಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ರಾಹುಲ್ ದ್ವಂದ ಹೇಳಿಕೆ: ಅಣ್ಣಾ ಅವರ ಹೋರಾಟಕ್ಕೆ ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ, ದೇಶದ ಯುವ ಜನತೆಯ ದಾರಿ ತಪ್ಪಿಸುವ ಇಂಥ ಹೋರಾಟಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು. ಲೋಕಪಾಲ್ ಅನ್ನು ಚುನಾವಣಾ ಆಯೋಗದಂತೆ ಸಂಸದೀಯ ಸಂಸ್ಥೆಯನ್ನಾಗಿಸಿದರೆ ಮಾತ್ರ ಪ್ರಯೋಜನ ಕಾಣಬಹುದು ಎಂದರು.
ತಕ್ಷಣವೇ ಬಿಜೆಪಿ ಸೇರಿದಂತೆ ವಿಪಕ್ಷಗಳು ರಾಹುಲ್ ಗಾಂಧಿ ಅವರ ಭಾಷಣ ಮೊಟಕುಗೊಳಿಸುವಂತೆ ಆಗ್ರಹಿಸಿದರು. ಯಾರೋ ಬರೆದುಕೊಟ್ಟ ಭಾಷಣ ಓದುವ ರಾಹುಲ್ ರನ್ನು ಸುಮ್ಮನೆ ಕೂರಲು ಹೇಳಿ ಎಂದು ಸ್ಪೀಕರ್ ಮೀರಾ ಕುಮಾರ್ ಗೆ ಕೇಳಿಕೊಂಡರು.












Click it and Unblock the Notifications