ಅನಿತಾ-ಕುಮಾರ್ ದಂಪತಿಗೆ ಸಿಗುವುದೇ ಜಾಮೀನು?

ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಈ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಗುರುವಾರ ನಡೆಯಲಿದೆ.
ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಎಚ್‌ಡಿಕೆ ದಂಪತಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ನಿಯಮ ಉಲ್ಲಂಘಿಸಿ ಜಂತಕಲ್ ಗಣಿ ಕಂಪೆನಿಯ ಪರವಾನಿಗೆ ನವೀಕರಣಕ್ಕೆ ಕಾನೂನು ಬಾಹಿರ ಅನುಮತಿ ನೀಡಿದ್ದರು.
ಅಲ್ಲದೆ ವಿಶ್ವಭಾರತಿ ಗೃಹ ನಿರ್ಮಾಣ ಸಂಘಕ್ಕೆ ಅಕ್ರಮವಾಗಿ ಜಮೀನು ಮಂಜೂರು ಮಾಡಿದ್ದರು. ಇದಕ್ಕೆ ಪ್ರತಿಫಲವಾಗಿ ಪತ್ನಿ ಅನಿತಾ ಕುಮಾರಸ್ವಾಮಿ ಬನಶಂಕರಿಯ 3ನೆ ಹಂತದಲ್ಲಿ ವಸತಿ ನಿವೇಶನವನ್ನು ಪಡೆದುಕೊಂಡಿದ್ದರು ಎಂದು ವಕೀಲ ವಿನೋದ್ ಕುಮಾರ್ ಖಾಸಗಿ ದೂರು ದಾಖಲಿಸಿದ್ದರು.












Click it and Unblock the Notifications