ಬಂಗಾರಪ್ಪಗೆ ಯಡ್ಡಿ-ಕಟ್ಟಾ ಸ್ಥಿತಿ ಕಂಡು ಆಯ್ಯೋ ಅನಿಸ್ತಿದೆ

ಇಂದು ಇಡೀ ಬಿಜೆಪಿ ವಲಯವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿ ರಾಷ್ಟ್ರ ನಾಯಕರು ಗಣಿಯ ಲಾಭ ಪಡೆದು ಯಡಿಯೂರಪ್ಪಅವರನ್ನು ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದರು. ಆದ್ದರಿಂದ ಬಿಜೆಪಿ ವರಿಷ್ಠರೂ ಸಹ ಯಡಿಯೂರಪ್ಪನವರಂತೆ ಪದತ್ಯಾಗ ಮಾಡಬೇಕು. ಅವರ ವಿರುದ್ದವೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ತಮ್ಮ ಅಧಿಕಾರವಧಿಯಲ್ಲಿ ಬಕಾಸೂರನಂತೆ ಎಚ್ಚರತಪ್ಪಿ ಅಕ್ರಮವಾಗಿ ಆಸ್ತಿ-ದುಡ್ಡು ಮಾಡಿಕೊಂಡಿದ್ದಾರೆ. ಬಡ ರೈತರ ಜಮೀನನ್ನು ಕಡಿಮೆ ಬೆಲೆಗೆ ಕೊಂಡು, ವಿದೇಶಿ ಕಂಪನಿಗಳಿಗೆ ದೊಡ್ಡ ಮೊತ್ತಕ್ಕೆ ಮಾರಿದ್ದಾರೆ. ಬಡವರ ಕಣ್ಣೀರು ಯಡಿಯೂರಪ್ಪಗೆ ತಟ್ಟಿದೆ.
ಆದ್ದರಿಂದ ಅವರು ಜೈಲು ಸೇರಲು ದಿನ ಎಣಿಸಬೇಕಷ್ಟೆ. ಜನ ಲೋಕಪಾಲ ಮಸೂದೆ ಜಾರಿಯಿಂದ ಮಾತ್ರ ದೇಶಾದ್ಯಂತ ಇರುವ ವ್ಯಾಪಾಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.












Click it and Unblock the Notifications