ಕುತೂಹಲದ ಉಗ್ರಾಣವಾದ ಅನಂತ ಸಂಪತ್ತು: ಸರಕಾರದ ನಿಲುವೇನು?
ತಿರುವನಂತಪುರ,
ಆಗಸ್ಟ್ 14: ಸರಕಾರ ಅಷ್ಟಮಂಗಲ ಪ್ರಶ್ನೆಯ ಫಲಶ್ರುತಿಯನ್ನು ನ್ಯಾಯಾಲಯಕ್ಕೆ ತಿಳಿಸಿ ಅದು ನೀಡುವ ಆದೇಶದಂತೆ ನಡೆದುಕೊಳ್ಳಲಿದೆ ಎನ್ನುವ ಮೂಲಕ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಎಲ್ಲ ಹೊಣೆಯನ್ನು ಸುಪ್ರೀಂ ಕೋರ್ಟ್‌ಗೆ ಒಪ್ಪಿಸಿದ್ದಾರೆ. id="toptextpromo">ಇದೀಗ
ಸಂಪತ್ತಿನ ಮೌಲ್ಯಮಾಪನಕ್ಕೆ ನೇಮಕವಾಗಿರುವ ಪಂಚ ಸದಸ್ಯ ಸಮಿತಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ. ಅಷ್ಟಮಂಗಲ ಪ್ರಶ್ನೆ ಮುಗಿದ ಬಳಿಕ ಸಭೆ ಸೇರಿದ ಸಮಿತಿ ಬಿ ಉಗ್ರಾಣವನ್ನು ತೆರೆಯುವ ಇಂಗಿತ ವ್ಯಕ್ತಪಡಿಸಿದ್ದರೂ ಆ ಬಗ್ಗೆ ಸ್ಪಷ್ಟ ಸುಳಿವನ್ನು ಮಾತ್ರ ನೀಡಿಲ್ಲ. ಮುಂದಿನ ವಾರ ಸಮಿತಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ ಹಾಗೂ ಆ. 22ರಂದು ಬಿ ಕೊಠಡಿಯ ಕುರಿತು ಚರ್ಚಿಸಲಿದೆ. id='are-slot-1' class='oiad oi-axt oiadv'> id='top-searched-articles'>ತಿರುವಾಂಕೂರು
ರಾಜಮನೆತನದವರು ಬಿ ಉಗ್ರಾಣವನ್ನು ತೆರೆಯಬಾರದೆಂದು ಹೇಳುತ್ತಿದ್ದಾರೆ. ಪಂಚ ಸದಸ್ಯ ಸಮಿತಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಉಗ್ರಾಣವನ್ನು ತೆರೆಯದಿರಲು ನಿರ್ಧರಿಸಿದರೂ ಸುಪ್ರೀಂಕೋರ್ಟ್‌ಗೆ ತೆರೆಯಲು ಆದೇಶಿಸುವ ಅಧಿಕಾರ ಇದೆ. ಜನರ ಪರ ಅಥವಾ ವಿರೋಧಿ ಭಾವನೆ ಅಥವಾ ದೈವಾಜ್ಞೆಗಳನ್ನು ಕಾನೂನು ಪ್ರಕಾರ ನ್ಯಾಯಾಂಗ ಮನ್ನಿಸುವಂತಿಲ್ಲ. ಅದು ವಾಸ್ತವದ ನೆಲೆಗಟ್ಟಿನಲ್ಲಿ ತೀರ್ಪು ನೀಡುತ್ತದೆ. ಹೀಗಾಗಿ ಅನಂತನ ಬಿ ಉಗ್ರಾಣ ಈಗ ಅಪಾರ ಕುತೂಹಲದ ಕೇಂದ್ರ ಬಿಂದುವಾಗಿದೆ.











Click it and Unblock the Notifications