ದಕ್ಷಿಣೆ ತರಲಿಲ್ಲ ಎಂದು ಪತ್ನಿಯನ್ನು ಕೊಂದ ಇಂಜಿನಿಯರ್
ಬೆಂಗಳೂರು
ಆ.10 : ನಗರದಲ್ಲಿ ಮತ್ತೊಮ್ಮೆ ವರದಕ್ಷಿಣೆ ಕಿರುಕುಳ, ಸಾವಿನ ಸುದ್ದಿ ಅಪ್ಪಳಿಸಿದೆ. ವರದಕ್ಷಿಣೆ ತರಲಿಲ್ಲ ಎಂಬ ಕಾರಣ ತನ್ನ ಪತ್ನಿಯನ್ನು ಇಂಜಿನಿಯರ್ ಒಬ್ಬ ಕೊಲೆಗೈದ ಘಟನೆ ನಡೆದಿದೆ. id="toptextpromo">ಕೆ.ಆರ್
ಪುರಂನ ದೇವಸಂದ್ರದ ನಿವಾಸಿ 22 ವರ್ಷದ ಅನುಷಾ ಎಂಬ ಗೃಹಿಣಿಯೇ ಸಾವನ್ನಪ್ಪಿರುವ ದುರ್ದೈವಿ. ಇತ್ತೀಚೆಗೆ ತವರುಮನೆಯಿಂದ ಮರಳಿದ್ದ ಅನುಷಾ ಹಣ, ಒಡವೆ ತರದೆ ಬರೀಗೈಯಲ್ಲಿ ಬಂದಿದ್ದು ಕಂಡು ಆಕೆ ಪತಿ ಕೆರಳಿದ್ದಾನೆ. ಪತ್ನಿಗೆ ಅಸಾಧ್ಯವಾದ ಕಿರುಕುಳ ನೀಡಿದ್ದಲ್ಲದೆ ಆಕೆ ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಭಯದಿಂದ
ಸಾವು: ಮಂಚದ ಮೇಲೆ ಹೆಣವಾಗಿ ಮಲಗಿದ್ದ ಪತ್ನಿಯನ್ನು ಕಂಡು ಭಯಗೊಂಡ ಆರೋಪಿ ವಿನಯ್, ಕೊಲೆ ಕೇಸ್ ಗೆ ಹೆದರಿ ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ ಸಾಯುವುದನ್ನು ಕಂಡ ವಿನಯ್ ಅಪ್ಪ ಕೂಡಾ ಸಾವಿನಲ್ಲಿ ಜೊತೆಯಾಗಿದ್ದಾರೆ. ಒಂದು ಸಲಕ್ಕೆ ಕುಟುಂಬದಲ್ಲಿ ಮೂವರು ಪ್ರಾಣ ತೆತ್ತಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಕೇಸ್ ದಾಖಲಿಸಿಕೊಂಡ ಕೆಆರ್ ಪುರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.











Click it and Unblock the Notifications