ಯೌವ್ವನದಲ್ಲಿ ಕೂಡಿಟ್ಟಿದ್ದು ಮುಪ್ಪಿಗೆ ಎನ್ನುವುದು ಇದಕ್ಕೇನಾ!?

ಕ್ಲಾರ್ಕ್ ಮೂರ್ ವಿಳಾಸ ಹೊಂದಿದ ಈ ಲಕೋಟೆ ಪೆನ್‌ಸಿಲ್ವೆನಿಯಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಕಳೆದ ವಾರ ತಲುಪಿದೆ. ಲಕೋಟೆಯ ಮೇಲೆ ಅದನ್ನು ಅಂಚೆಪೆಟ್ಟಿಗೆಗೆ ಹಾಕಿದ ದಿನ ಫೆಬ್ರುವರಿ 1958 ಎಂಬ ಅಂಚೆ ಕಚೇರಿಯ ಮುದ್ರೆ ಇದೆ.
ಪ್ರೇಮ ನಿವೇದನೆಯನ್ನು ಒಳಗೊಂಡ ಈ ಪತ್ರದಲ್ಲಿ ವೊನ್ನಿ ಎಂಬ ಹೆಸರಿದೆ. 'ನಿನ್ನಿಂದ ಶೀಘ್ರ ಉತ್ತರ ನಿರೀಕ್ಷಿಸುತ್ತಿರುವುದಾಗಿ' ಪತ್ರವನ್ನು ಕೊನೆಗೊಳಿಸಲಾಗಿದೆ. ಅಂದರೆ, ಅಂದು ಹದಿಹರೆಯನಾಗಿದ್ದ ವಿದ್ಯಾರ್ಥಿ ಈಗ 74 ವರ್ಷದ ವೃದ್ಧನಾಗಿದ್ದಾನೆ. ಲಕೋಟೆಯ ಮೇಲಿನ ಕ್ಲಾರ್ಕ್ ಮೂರ್ ಹೆಸರನ್ನು ಕಂಡ ಅವನ ಅಂದಿನ ಸಹಪಾಠಿಗಳು ಪತ್ರವನ್ನು ಅವನ ವಿಳಾಸಕ್ಕೆ ತಲುಪಿಸಿದ್ದಾರೆ. ಅಂದಿನ ಕ್ಲಾರ್ಕ್ ಮೂರ್ ಈಗ ಮುಹಮ್ಮದ್ ಸಿದ್ದಿಖ್ ಆಗಿ ಮತಾಂತರಗೊಂಡಿದ್ದಾನೆ.
ಸುಖಾಂತ್ಯ... ಪತ್ರ ಸಿಗದ್ದಿದ್ದರೆ ಏನಂತೆ, ಪತ್ರ ಬರೆದ ಹುಡುಗಿ ಸಿದ್ದಿಖ್‌ಗೆ ದೊರೆತಿದ್ದಾಳೆ. ಹೌದು! ಆಶ್ಚರ್ಯವೆಂದರೆ ಅಂದು ಈ ಪತ್ರದ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದ ವೊನ್ನಿಯನ್ನೇ ಸಿದ್ದಿಖ್ ಮದುವೆಯಾಗಿದ್ದಾರೆ.
1965ರಲ್ಲಿ ಸಿದ್ದಿಕ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬಳಿಕ ವೊನ್ನಿಯನ್ನು ವರಿಸಿದ್ದ. ನಂತರ ಅವಳೊಂದಿಗೆ ವಿಚ್ಛೇದನವನ್ನೂ ಪಡೆದಿದ್ದ. ದಾಂಪತ್ಯದ ಫಲವಾಗಿ ಅವರಿಗೆ ನಾಲ್ವರು ಮಕ್ಕಳು. ಮರು ಮದುವೆಯಾಗಿರುವ ಸಿದ್ಧಿಖ್‌ಗೆ ಎರಡನೇ ಪತ್ನಿಯಿಂದ 15 ಜನ ಮಕ್ಕಳಿದ್ದಾರೆ.
'ಈ ಬಗ್ಗೆ ನಾನು ಎಂದಿಗೂ ಇಂಥ ಕನಸು ಕಾಣಲಿಲ್ಲ; ಮೊದಲು ನಾನು ಚಕಿತನಾದೆ; ಈ ಪತ್ರ ಆ ಸಮಯದಲ್ಲಿನ ಪ್ರಾಮಾಣಿಕತೆ, ಆಸಕ್ತಿ ಮತ್ತು ಮುಗ್ಧತೆಯನ್ನು ಪರೀಕ್ಷಿಸುವ ಪುರಾವೆಯಾಗಿದೆ' ಎಂದು ಸಿದ್ದಿಕ್ ಹೇಳುತ್ತಾರೆ.
;











Click it and Unblock the Notifications