ರಾಮದೇವ್ ಉಪವಾಸ ಅಂತ್ಯ: ರವಿಶಂಕರ್ ಸಂಧಾನ ಯಶಸ್ವಿ
ಡೆಹ್ರಾಡೂನ್,
ಜೂನ್ 12: ಭ್ರಷ್ಟಾಚಾರದ ವಿರುದ್ಧ 9 ದಿನಗಳಿಂದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದ ಯೋಗಗುರು ಬಾಬಾ ರಾಮದೇವ್ ಅವರು ಭಾನುವಾರ ಬೆಳಗ್ಗೆ 11.15 ಗಂಟೆಯಲ್ಲಿ ಉಪವಾಸ ನಿಲ್ಲಿಸಿದ್ದಾರೆ. ಬೆಂಗಳೂರಿನ ರವಿಶಂಕರ್ ಗುರೂಜಿ ಅವರು ಬಾಬಾ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. id="toptextpromo">ಶನಿವಾರ
ಮಧ್ಯಾಹ್ನ ತೀವ್ರ ಅಸ್ವಸ್ಥರಾದ ರಾಮದೇವ್ ಅವರನ್ನು ಹಿಮಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಬಾಬಾ ತಮ್ಮ ನಿರಶನ ಮುಂದುವರಿಸಿದ್ದರು. ಉಪವಾಸ ಕೈಬಿಡುವಂತೆ ಬಾಬಾ ಮೇಲೆ ನಾನಾ ಕಡೆಗಳಿಂದ ತೀವ್ರ ಒತ್ತಡ ಹೇರಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಶನಿವಾರ
ಇಲ್ಲಿಗೆ ಆಗಮಿಸಿದ ಆರ್ಟ್ ಆಫ್ ಲಿವಿಂಗ್ ಗುರೂಜಿ ಅವರು ರಾಮದೇವ್ ಉಪವಾಸ ನಿಲ್ಲಿಸುವಂತೆ ಕೇಳಿಕೊಂಡಿದ್ದರಾದರೂ ತಮ್ಮ ಪ್ರಯತ್ನದಲ್ಲಿ ಸಫಲಾಗಿರಲಿಲ್ಲ. ಆದರೆ ಭಾನುವಾರ ಬೆಳಗ್ಗೆ ರಾಮದೇವ್ ಅವರನ್ನು ಮತ್ತೆ ಭೇಟಿಯಾಗಿ ಮಾತುಕತೆ ನಡೆಸಿದ ಗುರೂಜಿ, ಬಾಬಾ ಆಹಾರ ಸೇವನೆಗೆ ಸಮ್ಮತಿಸಿದ್ದಾರೆ ಎಂದು ಪ್ರಕಟಿಸಿದರು.











Click it and Unblock the Notifications