ಸಂಪುಟ ವಿಸ್ತರಣೆ ಇನ್ನೂ ಗಾಳಿಸುದ್ದಿಯಾಗೇ ಇದೆ

BS Yeddyurappa on Cabinet Expansion
ಬೆಂಗಳೂರು, ಜೂ.9: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಸರಿಯಾದ ಮಹೂರ್ತ ಸಿಕ್ಕಿಲ್ಲ. 'ಈಗೇನಿದ್ದರೂ ಅಭಿವೃದ್ದಿಯ ಬಗ್ಗೆ ಚಿಂತನೆಯೇ ಹೊರತು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಕುರಿತ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ"ಎಂದು ಕಡ್ಡಿ ತುಂಡು ಮಾಡಿದಂತೆ ಮುಖ್ಯಮಂತ್ರಿ ಹೇಳಿದ್ದಾರೆ.

ಹಲವು ಬಾರಿ ಮುಂದೂಡಲ್ಪಟ್ಟ ಸಂಪುಟ ವಿಸ್ತರಣೆಗೆ ಹೈ ಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ನೀಡಿದರೂ ಶಿವರಾತ್ರಿ, ವಿಶ್ವಕನ್ನಡ ಸಮ್ಮೇಳನ, ಮತ್ತೆ ಕಾಣಿಸಿಕೊಂಡ ಬಂಡಾಯದ ಹೊಗೆಯಿಂದ ಯಡಿಯೂರಪ್ಪ ಸಾಕಷ್ಟು ದಣಿದಿದ್ದಾರೆ. ಇ-ಆಡಳಿತ ಇಲಾಖೆಯ ನೂತನ ದತ್ತಾಂಶ ಕೇಂದ್ರ(Data Centre) ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ಕುರಿತು ಕೇಳಿದ ಪ್ರಶ್ನೆಗೆ ಸಿಎಂ ಉತ್ತರಿಸುತ್ತಾ ಸಂಪುಟ ವಿಸ್ತರಣೆ ಇಲ್ಲ ಎಂದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಚಿವ ಸ್ಥಾನ ಪಡೆಯಬೇಕು ಎಂಬುದು ಪ್ರತಿಯೊಬ್ಬ ಶಾಸಕನ ಆಕಾಂಕ್ಷೆ. ಈ ಬಗ್ಗೆ ಕೆಲವರಿಂದ ಅಪೇಕ್ಷೆಗಳು ಕೇಳಿ ಬಂದಿವೆ. ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಟುಸ್ ಎಂದ ನಿರೀಕ್ಷೆ: ವರ್ತೂರು ಪ್ರಕಾಶ್, ಅಪ್ಪಚ್ಚುರಂಜನ್, ರಾಜೂ ಗೌಡ, ಸಿ.ಟಿ.ರವಿ, ಸೊಗಡು ಶಿವಣ್ಣ, ಸೇರಿದಂತೆ ಒಟ್ಟು ಆರು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಕಚೇರಿಯಿಂದ ಹರಿದು ಬಂದ ಸುದ್ದಿ ಸದ್ಯಕ್ಕೆ ಗಾಳಿ ಸುದ್ದಿಯಾಗೇ ಹರಿದಾಡುತ್ತಿದೆ. ಮುಂದಿನ ಬದಲಾವಣೆಗಳಿಗೆ ತಪ್ಪದೇ ನಿರೀಕ್ಷಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+