'ಮುಂಬೈ ಇಸ್ಕಾನ್ ಗುರುಗಳಿಂದಲೇ ಲೈಂಗಿಕ ಹಗರಣ'

Madhu Pandita Dasa (pic : madhupanditdasa.info)
ಬೆಂಗಳೂರು, ಮೇ 31 : ಇಸ್ಕಾನ್ ನ ಬೆಂಗಳೂರು ಶಾಖೆ ಮುಂಬೈ ಇಸ್ಕಾನ್ ಗೆ ಸೇರಿದ್ದೆಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೇ ಸಿಡಿದುಬಿದ್ದಿರುವ ಮಧು ಪಂಡಿತ ದಾಸ ಅವರು, ಮುಂಬೈ ಶಾಖೆಯ ಮೇಲ್ವಿಚಾರಣಾ ಸಮಿತಿಯೇ ಅಕ್ರಮವಾಗಿದ್ದು, ಹಿರಿಯ ಗುರುಗಳೇ ಲೈಂಗಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚಂಚಲಪತಿ ದಾಸ ಅವರು ಕೂಡ ತಿರುಗಿಬಿದ್ದಿದ್ದು, ಲೈಂಗಿಕ ಹಗರಣ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿದ್ದರಿಂದಲೇ ಮಧು ಪಂಡಿತ ದಾಸರ ವಿರುದ್ಧ ಮುಂಬೈ ಶಾಖೆಯವರು ವೈಯಕ್ತಿಕ ದ್ವೇಷ ಕಾರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನ ಅಕ್ರಮಗಳ ವಿಚಾರಣೆಗೆ ನೇಮಿಸಲಾಗಿರುವ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿರುವ ಕೊಲ್ಕತಾದ ದಯಾರಾಮ ದಾಸ್ ಅವರೇ ದೊಡ್ಡ ರಿಯಲ್ ಎಸ್ಟೇಟ್ ಕುಳವಾಗಿದ್ದು, ಕೊಲ್ಕತಾದಲ್ಲಿ ದೊಡ್ಡದೊಡ್ಡ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ ಎಂದೂ ಚಂಚಲಪತಿ ಆರೋಪಗಳ ಸುರಿಮಳೆ ಸುರಿಸಿದ್ದಾರೆ.

ಹಿಂದೆ 2001ರಲ್ಲಿ ಆದಿಧಾರಣ ದಾಸ ಅವರು ಲೈಂಗಿಕ ಹಗರಣಗಳನ್ನು ಬಯಲಿಗೆಳೆದಿದ್ದಾಗ, ಇದೇ ದಯಾರಾಮ ಗೂಂಡಾಗಳನ್ನು ಸೇರಿಸಿ ಆದಿಧಾರಣ ದಾಸರನ್ನು ಅನಾಮತ್ತಾಗಿ ಇಸ್ಕಾನ್ ನಿಂದ ಹೊರಹಾಕಿದ್ದ ಎಂದು ಚಂಚಲಪತಿ ದಾಸ ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+