ಭೂಮಿ ವಾಪಸ್ ನೀಡಲು ಗಂಗೂಲಿಗೆ ಕೋರ್ಟ್ ಗಡುವು

ಭೂಮಿಯನ್ನು ಎರಡು ವಾರದೊಳಗೆ ವಾಪಸ್ ನೀಡುವಂತೆ ಗಂಗೂಲಿಗೆ ಕೋರ್ಟ್ ಆದೇಶಿಸಿದೆ. ಇದರೊಂದಿಗೆ ಗಂಗೂಲಿ ನೀಡಿದ ಹಣವನ್ನು ಎರಡು ವಾರದೊಳಗೆ ಹಿಂತುರುಗಿಸುವಂತೆ ಪಶ್ಚಿಮ ಬಂಗಾಳ ಸರಕಾರಕ್ಕೆ ಕೋರ್ಟ್ ಹೇಳಿದೆ.
ಶಾಲೆಯ ನಿರ್ಮಾಣಕ್ಕಾಗಿ ಗಂಗೂಲಿಗೆ ಭೂ ಹಂಚಿಕೆ ಮಾಡಲಾಗಿತ್ತು. ಆದರೆ ನಿಯಮಗಳನ್ನು ಉಲ್ಲಂಘಿಸಿ 44.9 ಕೋಟಿ ರು. ಮೌಲ್ಯದ ಭೂಮಿಯನ್ನು ಕೇವಲ 63 ಲಕ್ಷ ರು.ಗೆ ನೀಡಿರುವುದರ ಕುರಿತು ತೀವ್ರ ವಿರೋಧ ವ್ಯಕ್ತವಾಗಿತ್ತು.
2010ರಲ್ಲಿ ಈ ಕುರಿತು ಅನಿವಾಸಿ ಭಾರತೀಯರೊಬ್ಬರು ನೀಡಿದ ದೂರನ್ನು ವಿಚಾರಣೆ ನಡೆಸಿದ ಕೊಲ್ಕತ್ತಾ ಹೈಕೋರ್ಟ್ ಗಂಗೂಲಿ ಪರವಾಗಿ ತೀರ್ಪು ನೀಡಿದ್ದರು. ಆದರೆ ಈ ತೀರ್ಪಿನಿಂದ ತೃಪ್ತಿಯಾಗದ ಅವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications