ಕೇಂದ್ರ ಸಂಪುಟ ಸಭೆ ಇಂದೂ ಇಲ್ಲ, ನಾಳೆಯೂ
ನವದೆಹಲಿ,
ಮೇ 17: ರಾಜ್ಯಪಾಲ ಭಾರದ್ವಾಜ್ ಆಣಿತಿಯಂತೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರಕಾರದ ಅಳಿವು ಉಳಿವಿನ ಬಗ್ಗೆ ನಿರ್ಣಯ ಕೈಗೊಳ್ಳಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ. ಈ ಸಂಬಂಧ ಮಂಗಳವಾರವೂ ಕೇಂದ್ರ ಸಂಪುಟ ಸಭೆ ಸೇರುವುದು ಅನುಮಾನವಾಗಿದೆ. id="toptextpromo">ರಾಜ್ಯಪಾಲ
ಭಾರದ್ವಾಜ್ ವರದಿ ಬಗ್ಗೆ ಕೇಂದ್ರ ಸಚಿವರಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಜತೆಗೆ, ಸರಕಾರಗಳನ್ನು ಈ ರೀತಿ ಕಿತ್ತೊಗೆದು ಅಪಖ್ಯಾತಿ ಸಂಪಾದಿಸುವುದಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮತ್ತು ಅವರ ಪುತ್ರ, ಯುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಸುತರಾಂ ಇಷ್ಟವಿಲ್ಲ. ಆದ್ದರಿಂದ ನಿರ್ಣಯ ಕೈಗೊಳ್ಳುವ ಸಲುವಾಗಿ ಸಂಪುಟ ಸಭೆ ಸೇರುವುದಕ್ಕೆ ಮೀನಮೇಶ ಎಣಿಸುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ
ಬುಧವಾರವೂ ಕೇಂದ್ರ ಸಂಪುಟದ ಸಭೆಗೆ ಸಮಯ ನಿಗದಿಯಾಗಿಲ್ಲ. ಆದ್ದರಿಂದ ವಿಷಯವನ್ನು ಹೀಗೇ ಮುಂದುವರಿಯಲು ಬಿಟ್ಟು, ಎಲ್ಲ ತಣ್ಣಗಾದ ಬಳಿಕ ಭಾರದ್ವಾಜ್ ಮತ್ತು ಅವರ ವರದಿಯನ್ನು ಮೂಲೆಗುಂಪು ಮಾಡುವುದು. ಇದೇ ವೇಳೆ ಯಡಿಯೂರಪ್ಪ ಸರಕಾರವನ್ನು ಹಾಗೆಯೇ ಮುಂದುವರಿಯಲು ಬಿಟ್ಟು ಜಾಣತನ ಮೆರೆಯುವುದೂ ಕಾಂಗ್ರೆಸ್ ಆಲೋಚನೆಯಾಗಿದೆ ಎನ್ನಲಾಗಿದೆ.











Click it and Unblock the Notifications