ಪತ್ರಕರ್ತ ಮತ್ತಿಹಳ್ಳಿ ನಾಗರಾಜರಾವ್ ವಿಧಿವಶ

ಮೃತರು ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ವಿಧಿ ಸಂಪ್ರದಾಯಗಳ ಪ್ರಕಾರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೆರವೇರಲಿದೆ.
ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ್ದ ಮತ್ತಿಹಳ್ಳಿ ನಾಗರಾಜ್‌ರಾವ್ ಅವರು, 38 ವರ್ಷ ಕಾಲ ಸೇವೆ ಸಲ್ಲಿಸಿ ಹುಬ್ಬಳ್ಳಿ ಆವೃತ್ತಿಯ ಸಂಪಾದಕರಾಗಿದ್ದರು. ಸಿಂಗಾಪುರ, ಯುನೈಟೆಡ್ ಕಿಂಗ್‌ಡಂ ಸೇರಿ 12 ದೇಶಗಳ ಅಧ್ಯಯನ ಪ್ರವಾಸ ಕೈಗೊಂಡು ಇರಾನ್ - ಇರಾಕ್‌ನಲ್ಲಿಯ ಹನಿ ನೀರಾವರಿ ಯೋಜನೆಯ ಯಶಸ್ವಿ ಕುರಿತು ಪುಸ್ತಕ ಪ್ರಕಟಿಸಿದ್ದರು.
ಇವರ ಪ್ರವಾಸಿ ಅನುಭವಗಳ 'ಏಷಿಯಾದ ಸುತ', 'ನಾರಿ ನಿನಗೆ ನಮೋ ನಮಃ', 'ಭೂ ಸ್ವರ್ಗ ಸ್ವಿಟ್ಜರ್‌ಲ್ಯಾಂಡ್' ಎಂಬ 4 ಪ್ರವಾಸಿ ಕಥನಗಳ ಕೃತಿಗಳು ಇತ್ತೀಚೆಗೆ ಬಿಡುಗಡೆ ಆಗಿದ್ದವು.
ಗಣ್ಯರ ಶೋಕ :ಮತ್ತಿಹಳ್ಳಿ ನಾಗರಾಜ್‌ರಾವ್ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ದಿವಾಕರಬಾಬು, ಎಂಎಲ್ಸಿ ಕೆ.ಸಿ. ಕೊಂಡಯ್ಯ, ಮುಖಂಡ ಎಂ.ಪಿ. ಪ್ರಕಾಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್. ಸೂರ್ಯನಾರಾಯಣರೆಡ್ಡಿ, ಬಳ್ಳಾರಿ ರಿಪೋರ್ಟರ್‍ಸ್ ಗಿಲ್ಡ್‌ನ ಸದಸ್ಯರು ಮೃತರ ಅಂತಿಮ ದರ್ಶನ ಪಡೆದು ತೀವ್ರ ಶೋಕ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.












Click it and Unblock the Notifications