ಆರೆಸ್ಸೆಸ್ ನಿಷೇಧಿಸಿ : ವಿಶ್ವನಾಥ್

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್‌ನ ಹಲವು ಮುಖಂಡರು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಯಲು ಮಾಡಿರುವ ಹಿನ್ನೆಲೆಯಲ್ಲಿ ಸಂಘಟನೆಯ ಮೇಲೆ ಕ್ರಮ ಜರಗಿಸಬೇಕು ಎಂದರು.
ಪಿಎಫ್‌ಐ ಸೇರಿದಂತೆ ದೇಶದಲ್ಲಿ ಯಾವುದೇ ಸಂಘಟನೆ ಶಾಂತಿ ಮತ್ತು ಸಾಮರಸ್ಯಕ್ಕೆ ದಕ್ಕೆ ಉಂಟುಮಾಡಿದರೆ ಅಂತಹ ಸಂಘಟನೆಗಳ ವಿರುದ್ಧವೂ ಸರಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಪಷ್ಟಪಡಿಸಿದರು.
ಆರೆಸ್ಸೆಸ್ ಸ್ವಾತಂತ್ರ್ಯ ಪೂರ್ವ ಸಂಘಟನೆಯಲ್ಲ. ದೇಶಕ್ಕೆ ಆರೆಸ್ಸೆಸ್ ಕಾಣಿಕೆ ಶೂನ್ಯ. ಆದರೆ, ಕಾಂಗ್ರೆಸ್ ಸ್ವತಂತ್ರ ಪೂರ್ವ ಸಂಘಟನೆಯಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಹಿರಿದಾದುದು. ಹಾಗಾಗಿ ಆರೆಸ್ಸೆಸ್ ನಿಂದ ಕಾಂಗ್ರೆಸ್ ರಾಷ್ಟ್ರ ಪ್ರೇಮದ ಪಾಠ ಕಲಿಯಬೇಕಿಲ್ಲ ಎಂದು ಅವರು ತೀಕ್ಷ್ಣವಾಗಿ ನುಡಿದರು.
ಸೋನಿಯಾ ಗಾಂಧಿ ಅಮೆರಿಕದ ಏಜೆಂಟ್ ಆಗಿದ್ದು, ಮಾಜಿ ಪ್ರಧಾನಿಗಳಾದ ರಾಜೀವ ಗಾಂಧಿ, ಇಂದಿರಾಗಾಂಧಿ ಹತ್ಯೆಗೆ ಸೋನಿಯಾ ಗಾಂಧಿ ಕಾರಣ ಎಂದು ಆರೆಸ್ಸೆಸ್ ಮಾಜಿ ಮುಖ್ಯಸ್ಥ ಕೆ ಎಸ್ ಸುದರ್ಶನ್ ಆರೋಪಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ಇಳಿದಿದೆ.












Click it and Unblock the Notifications