ಆಪರೇಷನ್ ಕಮಲದ ಸಿಡಿ ಬಿಡುಗಡೆ ಮಾಡಿದ ಜೆಡಿಎಸ್

HD Kumaraswamy
ಬೆಂಗಳೂರು, ಅ. 22 : ಪಕ್ಷದ ಗುಬ್ಬಿ ಶಾಸಕ ಎನ್ ಆರ್ ಶ್ರೀನಿವಾಸ್ ಅವರಿಗೆ ಬಿಜೆಪಿ ಕೋಟ್ಯಂತರ ರುಪಾಯಿ ಆಮಿಷವೊಡ್ಡಿರುವ ಸಿಡಿ ಸಮೇತ ಕುದುರೆ ವ್ಯಾಪಾರದ ಹಿನ್ನೆಲೆಯಲ್ಲಿ ತಕ್ಷಣ ರಾಜ್ಯ ಸರಕಾರವನ್ನು ವಜಾಗೊಳಿಸುವಂತೆ ಜೆಡಿಎಸ್ ರಾಜ್ಯಪಾಲರನ್ನು ಆಗ್ರಹಿಸಿದೆ. ಜೆಡಿಎಸ್ ಬಿಡುಗಡೆ ಮಾಡಿರುವ ಸಿಡಿ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಗುರುವಾರ ರಾತ್ರಿ ತುರ್ತಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಶ್ರೀನಿವಾಸ್ ಸಮ್ಮುಖದಲ್ಲಿ ಸಿಡಿ ಬಿಡುಗಡೆ ಮಾಡಿದರು. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಮುಖಾಂತರ ವ್ಯವಹಾರ ಕುದುರಿಸಲು ಪ್ರಯತ್ನ ನಡೆದಿತ್ತು. (ಅವರಿಬ್ಬರ ಸಂಭಾಷಣೆ ಇಲ್ಲಿ ಓದಿರಿ.) ಸುರೇಶ್ ಗೌಡ ಅವರ ಮೊಬೈಲ್ ಬಳಸಿ ಗೃಹ ಸಚಿವ ಆರ್ ಅಶೋಕ್ ನಮ್ಮ ಶಾಸಕರ ಜೊತೆಗೆ ಮಾತನಾಡಿದ್ದಾರೆ.

ದೂರವಾಣಿ ಧ್ವನಿ ಮುದ್ರಿಸಲಾಗಿತ್ತು. ಆದರೆ, ನಮ್ಮ ಕಡೆಯಿಂದ ಸಣ್ಣ ಅಚಾತುರ್ಯ ನಡೆಯಿತು ಮಂಗಳವಾರ ಶಾಸಕ ಶ್ರೀನಿವಾಸ್ ಮನೆ ಸುತ್ತ ಪಕ್ಷದ ಶಾಸಕರು ಕಾದು ಕುಳಿತಿದ್ದರು. ಇದರ ಸುಳಿವರಿತು ಬಿಜೆಪಿಯವರು ಹಣ ತೆಗೆದುಕೊಂಡು ಬರಲಿಲ್ಲ. ಇಲ್ಲವಾಗಿದ್ದರೆ 25 ಕೋಟಿ ರುಪಾಯಿಗಳನ್ನು ಮಾಧ್ಯಮದ ಮುಂದೆ ಪ್ರದರ್ಶಿಸುತ್ತಿದ್ದೇವು ಎಂದು ಕುಮಾರಸ್ವಾಮಿ ಹೇಳಿದರು. ಸಿಡಿಯಲ್ಲಿ ಏನೇನಿದೆ?

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+