ಕಲ್ಲುಕ್ವಾರಿಯಲ್ಲಿ ಬರೆಕುಸಿತ ಎರಡು ಜೀವ ಬಲಿ

ಗೊಂದಿಬಸವನಹಳ್ಳಿಯ ಡಿ.ಸಿ.ಸ್ವಾಮಿ ಎಂಬುವವರಿಗೆ ಸೇರಿದ ಮೈನ್ ಕ್ವಾರಿ(ಕಲ್ಲು ಗಣಿಗಾರಿಕೆ)ಯಲ್ಲಿ ಮಂಗಳವಾರ ಸಂಜೆ ಕಾರ್ಮಿಕರು ಟ್ರಾಕ್ಟರ್‌ಗೆ ಮಣ್ಣು ತುಂಬಿಸುತ್ತಿದ್ದ ಸಂದರ್ಭ ಮೇಲೆನ ಬರೆ ಕುಸಿದು ಕಾರ್ಮಿಕರಾದ ದೇವರಾಜು ಎಂಬುವವವರ ಮಗ ಸತೀಶ್‌ಕುಮಾರ್ (24), ಅಮಾವಸಯ್ಯ ಎಂಬುವವರ ಮಗ ರಾಜು (23) ಎಂಬವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಗೊಂದಿಬಸವನಹಳ್ಳಿ ಗ್ರಾಮದ ಶಿವ ಎಂಬುವವರ ಮಗ ಮಣಿ(24), ಡಿ.ಸಿ.ಸ್ವಾಮಿ ಎಂಬುವವರ ಮಗ ಹರೀಶ್ (26), ಪಟ್ಟಸ್ವಾಮಿ ಎಂಬುವವರ ಮಗ ಗಿರೀಶ್ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಉಪ-ಅಧೀಕ್ಷಕ ಜಯಪ್ರಕಾಶ್ ಅಕ್ಕರಕಿ, ವೃತ್ತ ನೀರಿಕ್ಷಕ ಪಿ.ಬಸವರಾಜು, ಠಾಣಾಧಿಕಾರಿ ಚನ್ನೇಗೌಡ ಭೇಟಿ ನೀಡಿ ಪರಿಶೀಲಿಸಿದರು.
ರಜೆ ದಿನ ಕೂಡಾ ಕ್ವಾರೆ ಕೆಲ್ಸ: ಕುಶಾಲನಗರದ ಸುತ್ತಮುತ್ತ ಇರುವ ಎಲ್ಲ ಕ್ವಾರಿಗಳಲ್ಲಿ ಮಂಗಳವಾರ ಸಂತೆ ದಿನವಾಗಿರುವುದರಿಂದ ರಜೆ ನೀಡಲಾಗುತ್ತದೆ. ಆದರೆ ಸ್ವಾಮಿಯವರು ಕಾರ್ಮಿರಿಗೆ ರಜೆ ನೀಡದೆ ಕೆಲಸ ಮಾಡಿಸಿರುವುದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಗೊಂದಿಬಸವನಹಳ್ಳಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ಸ್ಮಶಾನ ಮೌನ ಅವರಿಸಿದೆ.
ಗ್ರಾಮದಲ್ಲಿ ಸುಮಾರು 15 ಕ್ಕೂ ಹೆಚ್ಚು ಅಕ್ರಮವಾಗಿ ಕಲ್ಲುಕೊರೆಗಳಲ್ಲಿ ಗಣಿಗಾರಿಕೆ ನಡೆಲಾಗುತ್ತಿದೆ. ಇನ್ನೂ ಕೆಲವು ಕಡೆ ಹೈಟೆನ್ಷನ್ ವಿದ್ಯುತ್ ಲೈನ್ ಹಾದುಹೋಗಿದ್ದರೂ ಅದರ ಕೆಳಗಡೆ ಗಣಿಗಾರಿಕೆ ನಡೆಸುತ್ತಿದ್ದು ನೆಲಬಾಂಬ್ ಸಿಡಿಸುತ್ತಿದ್ದಾರೆ. ಇದು ಮುಂದೊಂದು ದಿನ ಭಾರೀ ದುರಂತಕ್ಕೆ ಅನುವು ಮಾಡಿಕೊಡಲಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪರಿಹಾರ ಷೋಷಣೆ: ಗೊಂದಿಬಸವನಹಳ್ಳಿ ಕಲ್ಲುಕೋರೆಯಲ್ಲಿ ಬರೆ ಕುಸಿದು ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 50ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದ್ದಾರೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ












Click it and Unblock the Notifications