ದೇವೇಗೌಡ ಭಸ್ಮಾಸುರ : ಯಡಿಯೂರಪ್ಪ

Yeddyurappa
ಗುಲ್ಬರ್ಗಾ, ಸೆ. 9 : ದೇವೇಗೌಡ ಒಬ್ಬ ಭಸ್ಮಾಸುರ, ಅವರಿಂದ ಮುಟ್ಟಿಸಿಕೊಂಡವರು ಯಾರೂ ಉದ್ದಾರ ಆಗಿಲ್ಲ. ಆಗಲು ಸಾಧ್ಯವೇನ್ರೀ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

ಗುಲ್ಬರ್ಗಾ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಶಶೀಲ್ ನಮೋಶಿ ಅವರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮೇಲೆ ಗದಾಪ್ರಹಾರ ನಡೆಸಿದರು.

ಮಾಜಿ ಪ್ರಧಾನಿ ದೇವೇಗೌಡ ಭಸ್ಮಾಸುರ ಇದ್ದ ಹಾಗೆ, ಅವರನ್ನು ನಂಬಿದವರು ಯಾರೂ ಉದ್ಧಾರ ಆಗಿಲ್ಲ. ಅವರಿಂದ ಮುಟ್ಟಿಸಿಕೊಂಡ ಬಹುತೇಕ ನಾಯಕರು ಮನೆ ಸೇರಿಕೊಂಡಿರುವ ಇತಿಹಾಸವಿದೆ ಎಂದು ವ್ಯಂಗ್ಯವಾಡಿದರು. ಇತ್ತೀಚೆಗೆ ದೇವೇಗೌಡ ಯಡಿಯೂರಪ್ಪ ಅವರನ್ನು ಮಾನಗೆಟ್ಟ ಮುಖ್ಯಮಂತ್ರಿ ಎಂದಿರುವುದು ಗೊತ್ತಿರುವ ಸಂಗತಿ. ಯಡಿಯೂರಪ್ಪ ಒಬ್ಬ ಬಾಸ್ಟರ್ಡ್ ಎಂದದ್ದು ಹಳೆಯ ಸುದ್ದಿ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಂದೆಗೆ ಕಡಿಮೆಯೇನಿಲ್ಲ. 20 ತಿಂಗಳ ಮುಖ್ಯಮಂತ್ರಿ ಪದವಿಯನ್ನು ನೀಡುತ್ತೇವೆ ಎಂದು ಹೇಳಿದ್ದರು. ಕೊಟ್ರಾ ಸಿಎಂ ಸೀಟು ಎಂದು ಪ್ರಶ್ನಿಸಿದ ಅವರು, ವಿಶ್ವಾಸದ್ರೋಹ ಎಸಗಲು ಕುಮಾರಸ್ವಾಮಿ ನಂಬರ್ ಒನ್ ಎಂದು ಕಿಡಿಕಾರಿದರು.

ಧರ್ಮಸಿಂಗ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ಮೇಲೂ ದಾಳಿ ನಡೆಸಿದ ಸಿಎಂ, 9 ಸಲ ಶಾಸಕರಾಗಿ ಆಯ್ಕೆಯಾದ ಖರ್ಗೆ, ಮುಖ್ಯಮಂತ್ರಿಯಾದ ಧರ್ಮಸಿಂಗ್ ಹಿಂದುಳಿದ ವರ್ಗಕ್ಕೆ ಏನು ಮಾಡಿದ್ದಾರೆ. ಬಡವರನ್ನು ಬಡವರನ್ನಾಗಿಸಿ ತಾವು ಮಾತ್ರ ಶ್ರೀಮಂತರಾಗಿ ಮಹಾರಾಜರಂತೆ ಜೀವನ ನಡೆಸುತ್ತಿದ್ದಾರೆ. ಇಂತವರಿಗೆ ಕಿಂಚಿತ್ತಾದರೂ ಬಡವರ ಬಗ್ಗೆ ಕಾಳಜಿ ಇದೆಯೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+