ಡಿಸಿಎಂ ಹುದ್ದೆ ಅಗತ್ಯವಿಲ್ಲ; ಆರ್ ಅಶೋಕ್

ಉಸ್ತುವಾರಿ ಮಂತ್ರಿ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹುದ್ದೆ ಕುರಿತಂತೆ ಊಹಾಪೋಹ ಎದ್ದಿರುವುದು ಗೊಂದಲ ಸೃಷ್ಟಿಸುವ ಕಾರಣದಿಂದಲೇ ಹೊರತು, ಈ ಕುರಿತು ಸರ್ಕಾರದಲ್ಲಿ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಡಿಸಿಎಂ ಹುದ್ದೆ ಸೃಷ್ಟಿಯನ್ನು ತಳ್ಳಿಹಾಕಿದರು.
ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ದಿ ಕೆಲಸಗಳು ಉತ್ತಮವಾಗಿ ಸಾಗುತ್ತಿವೆ. ಹಾಗಾಗಿ ಡಿಸಿಎಂ ಹುದ್ದೆ ಅನಗತ್ಯ. ಲಿಂಗಾಯಿತ ಸಮುದಾಯಕ್ಕೆ ತಡೆಯೊಡ್ಡಿ ಒಕ್ಕಲಿಗ ಸಮುದಾಯದ ಅಶೋಕ್ ಅವರನ್ನು ಡಿಸಿಎಂ ಹುದ್ದೆಗೆ ತರಲು ರೆಡ್ಡಿಗಳು ಪ್ರಯತ್ನಿಸುತ್ತಿದ್ದಾರೆಂಬುದು ಕೇವಲ ಗಾಳಿ ಸುದ್ದಿಯಾಗಿದೆ. ಸಂಪುಟ ದರ್ಜೆ ಸಚಿವರೇ ಈ ಬಗ್ಗೆ ಗೊಂದಲ ಸೃಷ್ಟಿಸುವುದನ್ನು ಸಹಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಸಾರಿಗೆ ಇಲಾಖೆ ಜವಾಬ್ದಾರಿ ಜತೆಗೆ ಆಹಾರ ಇಲಾಖೆ, ಬೆಂಗಳೂರು ಉಸ್ತುವಾರಿ ಹಾಗೂ ಮಂಡ್ಯ ಉಸ್ತುವಾರಿ ಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ತಮ್ಮದಾಗಿರುವುದರಿಂದ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ತಲ್ಲೀನನಾಗಿದ್ದೇನೆ ಎಂದು ಹೇಳಿದ ಅಶೋಕ್, ಡಿಸಿಎಂ ಹುದ್ದೆಯ
ಆಕಾಂಕ್ಷಿಯಾಗುವ ಪ್ರಶ್ನೆಯೇ ಬರುವುದಿಲ್ಲ ಎಂದರು.












Click it and Unblock the Notifications