ಉಗ್ರಪ್ಪ ವಿರುದ್ದ ಮಾನನಷ್ಟ ಮೊಕದ್ದಮೆ
ಬೆಂಗಳೂರು,
ಜು. 25 : ಉತ್ತರ ಕನ್ನಡ ಜಿಲ್ಲೆಯ ಬೇಲೇಕೇರಿ ಬಂದರಿನಿಂದ ಅಕ್ರಮ ಅದಿರು ರಫ್ತಿನಲ್ಲಿ ಮುಖ್ಯಮಂತ್ರಿ ಕೈವಾಡವಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ವಕ್ತಾರ ವಿ ಎಶಸ್ ಉಗ್ರಪ್ಪ ಅವರ ವಿರುದ್ಧ ಮಾನನಷ್ಟ ಹೂಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ. id="toptextpromo">ಬೆಂಗಳೂರಿನ
ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದ್ದು, ಮುಂದಿನ ವಾರ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಕೆ ದಿವಾಕರ್ ಮತ್ತು ರಾಜ್ಯ ಅಭಿಯೋಜಕ ಚಂದ್ರಮೌಳಿ ಅವರ ಸಲಹೆಯಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿಕೆ ಪಾಟೀಲ್ ಅವರು ಮಾನನಷ್ಟ ಮೊಕದ್ದಮೆಯ ಅರ್ಜಿಯನ್ನು ಸಿದ್ದಪಡಿಸಿದ್ದು, ಒಪ್ಪಿಗೆಗಾಗಿ ಶುಕ್ರವಾರ ಅಭಿಯೋಜಕ ಚಂದ್ರಮೌಳಿ ಅವರಿಗೆ ಕಳುಹಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಮುಖ್ಯಮಂತ್ರಿಗಳ
ಪರವಾಗಿ ವಾದಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿ ಸರಕಾರ ಸದ್ಯದಲ್ಲೇ ಆದೇಶ ಹೊರಡಿಸುವ ಸಾಧ್ಯತೆ ಇದೆ. ಜುಲೈ 20 ರಂದು ಬೇಲೇಕೇರಿ ಅರಣ್ಯದಲ್ಲಿ 5 ಲಕ್ಷ ಟನ್ ಅದಿರು ನಾಪತ್ತೆಯಾಗಿರುವುದರ ಹಿಂದೆ ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರ ಕೈವಾಡ ಇದೆ ಎಂದು ವಿ ಎಸ್ ಉಗ್ರಪ್ಪ ಆರೋಪಿಸಿದ್ದರು.











Click it and Unblock the Notifications