ಕಾಂಗ್ರೆಸ್ಸಿಗರೆ ನಿತ್ಯ ಕೊಲೆ ಮಾಡ್ಬೇಡಿ

B Sriramulu
ಗದಗ, ಜು. 22 : ಅಕ್ರಮ ಗಣಿಗಾರಿಕೆ ಮುಂದಿಟ್ಟುಕೊಂಡು ರೆಡ್ಡಿ ಸಹೋದರರನ್ನು ಮತ್ತು ತಮ್ಮನ್ನು ಕಾಂಗ್ರೆಸ್ಸಿಗರು ಪ್ರತಿನಿತ್ಯ ಕೊಲೆ ಮಾಡುತ್ತಿದ್ದಾರೆ ಎಂದು ಸಚಿವ ಬಿ ಶ್ರೀರಾಮುಲು ಕಣ್ತುಂಬ ನೀರು ತುಂಬಿಕೊಂಡು ವೇದನೆ ತೋಡಿಕೊಂಡ ಪ್ರಸಂಗ ಬುಧವಾರ ನಡೆದಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯನ್ನು ಒಂದು ಬಾರಿ ಕೊಲೆ ಮಾಡಿ ಸಾಯಿಸಿದರೆ ಕಾಂಗ್ರೆಸ್ಸಿಗರು ಪ್ರತಿನಿತ್ಯ, ಪ್ರತಿಕ್ಷಣ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಮತ್ತು ತಮ್ಮನ್ನು ಹಿಂಸೆ, ನೋವು ಹಾಗೂ ಅವಮಾನ ಮಾಡುತ್ತಾ ಜೀವಂತವಾಗಿ ಸಾಯಿಸುತ್ತಿದ್ದಾರೆ ಎಂದು ಭಾವುಕರಾಗಿ ನುಡಿದರು.

ತುಂಗಭದ್ರಾ ನದಿಯಲ್ಲಿ 8 ಜನರು ಮೃತಪಟ್ಟ ಘಟನಾ ಸ್ಥಳಕ್ಕೆ ಸಚಿವ ಬಿ. ಶ್ರೀರಾಮುಲು ಅವರು ಬುಧವಾರ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಮೃತರ ವಾರಸುದಾರರಿಗೆ ತಲಾ 1 ಲಕ್ಷ ರು. ಪರಿಹಾರದ ಚೆಕ್ ಅನ್ನು ಶೀಘ್ರದಲ್ಲೇ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳದಲ್ಲಿಂದಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅಲ್ಲದೇ, ಮೃತರ ವಾರಸುದಾರರಿಗೆ ಪರಿಹಾರ ನೀಡಲು ಒಪ್ಪಿಗೆ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+