ದೇಶಪಾಂಡೆ ಕೇಸ್ ಈಗ ಮೇಡಂ ಕೈಲಿದೆ

ಸೋನಿಯಾ ಅವರ ಅಧಿಕೃತ ನಿವಾಸದಲ್ಲಿ ಇಂದು ಮಧ್ಯಾಹ್ನ ಭೇಟಿ ಮಾಡಿ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಆದರೆ, ಇದು ತಮ್ಮ ವಿರುದ್ಧ ಡಿಕೆ ಶಿವಕುಮಾರ್ ಹೂಡಿರುವ ಪಿತೂರಿ ಎಂದು ಸೋನಿಯಾಜಿಗೆ ಹೇಳಿದ್ದಾರೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಆರೋಪ ಸಾಬೀತಾದರೆ ಗಲ್ಲಿಗೇರಿಸಿ ಎಂದಿದ್ದ ದೇಶಪಾಂಡೆ, ಇಂದು ಸೋನಿಯಾ ಭೇಟಿ ನಂತರ ಮಾತನಾಡಿ, ಹೈಕಮಾಂಡ್ ಬಯಸಿದರೆ ನಾನು ರಾಜೀನಾಮೆಗೂ ಸಿದ್ಧನಿದ್ದೇನೆ. ಅದಕ್ಕೆ ನಾನು ಹೆದರುವುದಿಲ್ಲ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ ಎಂದು ದೇಶಪಾಂಡೆ ಹೇಳಿದರು.
ದೆಹಲಿಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಮೋತಿಲಾಲ್ ವೋರಾ , ಗುಲಾಂ ನಬಿ ಅಜಾದ್ ಅವರನ್ನು ಭೇಟಿ ಮಾಡಿದ ನಂತರ ಸೋನಿಯಾ ಗಾಂಧಿ ಭೇಟಿಗಾಗಿ ಎರಡು ದಿನದಿಂದ ದೇಶಪಾಂಡೆ ಕಾದು ಕೂತಿದ್ದರು.











Click it and Unblock the Notifications