ಕೂಡ್ಲಿಗಿಯಲ್ಲಿ ಮೇಲಧಿಕಾರಿ ಮೇಲೆ ಸಿಬ್ಬಂದಿ ಹಲ್ಲೆ

ಹಲ್ಲೆಗೆ ಒಳಗಾಗಿರುವ ವ್ಯಕ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಂ.ವಿ.ತಿಪ್ಪೇರುದ್ರಸ್ವಾಮಿ. ಸಹಾಯಕ ಸಿಬ್ಬಂದಿ ಅಬ್ದುಲ್ ರೆಹಮಾನ್ ಎಂಬಾತ ಬೆಳಿಗ್ಗೆ 10.40ರ ಸುಮಾರಿಗೆ ಹಲ್ಲೆ ಮಾಡಿದ್ದಾರೆ.
ಪ್ರಥಮ ದರ್ಜೆಯ ಕಾರಕೂನ ಆಗಿರುವ ಎಂ.ವಿ. ತಿಪ್ಪೇರುದ್ರಸ್ವಾಮಿ ಅವರು ಸಹಾಯಕ ಅಬ್ದುಲ್ ರೆಹಮಾನ್ ಅವರಿಗೆ ಕಚೇರಿ ಕೆಲಸಗಳನ್ನು ಮಾಡಲು ನಿರ್ದೇಶನ ನೀಡುತ್ತಿದ್ದಾಗ ಕೋಪೋದ್ರಿಕ್ತಗೊಂಡ ಅಬ್ದುಲ್ ರೆಹಮಾನ್ ತಿಪ್ಪೇರುದ್ರಸ್ವಾಮಿ ಅವರ ತಲೆ ಮತ್ತು ಮರ್ಮಾಂಗಕ್ಕೆ ಹೊಡೆದು ಪರಾರಿ ಆಗಿದ್ದಾನೆ. ತಿಪ್ಪೇರುದ್ರಸ್ವಾಮಿಯನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಕಚೇರಿ ಸಿಬ್ಬಂದಿಗಳ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಮೇಲಧಿಕಾರಿಗಳ ಮೇಲೆ ಹಲ್ಲೆ ಮಾಡಿರುವುದು ತಪ್ಪು ಮತ್ತು ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications