ಕೆಎಸ್ಸಾರ್ಟಿಸಿ ಲಾಭದಲ್ಲಿ ಕೊಂಚ ಇಳಿಕೆ
ಬೆಂಗಳೂರು,
ಮೇ.24: ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತೆ ಲಾಭದ ಹಾದಿ ಬಿಟ್ಟು ಕೊಂಚ ಪಕ್ಕಕ್ಕೆ ಸಾಗಿದೆ. ಕಳೆದ ವರ್ಷ 52 ಕೋಟಿ ರು ಲಾಭ ಗಳಿಸಿದ್ದ ಕೆಎಸ್ಸಾರ್ಟಿಸಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 49 ಕೋಟಿ ರು ಲಾಭ ಗಳಿಸಿದೆ ಎಂದು ರಾಜ್ಯ ಸಾರಿಗೆ ಸಚಿವ ಆರ್ ಅಶೋಕ ಇಂದು ಸುದ್ದಿಗಾರರಿಗೆ ತಿಳಿಸಿದರು. id="toptextpromo"> ಬಿಎಂಟಿಸಿ ಪ್ರಸಕ್ತ ವರ್ಷ 65 ಕೋಟಿ ರು ಲಾಭ ಗಳಿಸಿದೆ ಎಂದು ಅಂಕಿ ಅಂಶಗಳೊಡನೆ ವಿವರಿಸಿದರು. ವೋಲ್ವೋ ಮಾದರಿ ಹೊಸ ಬಸ್ ಗಳನ್ನು ದೂರದ ಪ್ರಯಾಣಕ್ಕೆ ನೀಡಲಾಗುವುದು. ಸುಮಾರು 85 ಲಕ್ಷ ಬೆಲೆಯ ಈ ಬಸ್ ಗಳಲ್ಲಿ 20 ಹೆಚ್ಚುವರಿ ಸೀಟುಗಳಿರುತ್ತದೆ. ಆರಂಭದಲ್ಲಿ 10 ಹೊಸ ಬಸ್ ಗಳು ಸಂಚರಿಸಲಿದ್ದು, ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿ, ಹೆಚ್ಚಿನ ಬಸ್ ಗಳನ್ನು ಬಿಡಲಾಗುವುದು ಎಂದರು. id='are-slot-1' class='oiad oi-axt oiadv'> id='top-searched-articles'>ನಗರದ
ಕೆಂಪೇಗೌಡ ಬಸ್ ನಿಲ್ದಾಣದ ಏಳೂವರೆ ಎಕರೆ ಜಮೀನನ್ನು ಮೆಟ್ರೋ ನಿಗಮಕ್ಕೆ ಹಸ್ತಾಂತರಿಸಲಾಗಿದೆ. ಇದರಿಂದ ಸಾರಿಗೆ ಸಂಸ್ಥೆ ಸುಮಾರು 161 ಕೋಟಿ ರುಗಳನ್ನು ಮೆಟ್ರೋ ನಿಗಮ ಡಬೇಕಾಗುತ್ತದೆ.ಮಂಗಳೂರಿನಲ್ಲಿ ವೋಲ್ವೋ ಬಸ್ ಜನ ಮೆಚ್ಚುಗೆ ಪಡೆದಿದ್ದು, 5 ಲಕ್ಷ ರು ಅಧಿಕ ಲಾಭ ಬಂದಿದೆ, ಮಂಗಳೂರು ನಗರ ಸಂಚಾರಕ್ಕೆ ಇನ್ನೂ 11 ವೋಲ್ವೋ ಬಸ್ ಗಳನ್ನು ಬಿಡಲಾಗುವುದು ಎಂದರು.











Click it and Unblock the Notifications