ಶ್ರೀರಾಮುಲು ಹತ್ಯೆ ಬೆದರಿಕೆ : 3 ಬಂಧನ
ಬಳ್ಳಾರಿ,
ಏ. 16 : ನಗರದ ಹಾಂವಭಾವಿ ರಸ್ತೆಯಲ್ಲಿರುವ ಸಚಿವ ಶ್ರೀರಾಮುಲು ಮನೆಗೆ ಶಸ್ತ್ರಸಜ್ಜಿತ ಐವರು ದುಷ್ಕರ್ಮಿಗಳ ತಂಡ ತೆರಳಿ ಜೀವ ಬೆದರಿಕೆ ಹಾಕಿದ ಘಟನೆ ಗುರುವಾರ (ಏ.15 ) ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕೌಲ್ ಬಜಾರ್ ಪೊಲೀಸರು ತಿಳಿಸಿದ್ದಾರೆ. id="toptextpromo"> KA 06, M 3246 ಇಂಡಿಕಾ ಕಾರಿನಲ್ಲಿ ಎಪ್ರಿಲ್ 11 ರಂದು ಆಗಮಿಸಿದ ಆಗಂತುಕರು ಸಚಿವರ ಬಗ್ಗೆ ವಿಚಾರಿಸಿ ಸಚಿವ ಶ್ರೀರಾಮುಲು ಜೀವ ತೆಗೆಯಲು ಬಂದಿರುವುದಾಗಿ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಗಳು ನೀವು ಯಾರೆಂದು ವಿಚಾರಿಸಿದಾಗ ಮೊದಲು ರಾಯಚೂರು ಮಾನ್ವಿ ಇಂದ ಬಂದಿದ್ದೇವೆ ಎಂದ ಆಗಂತುಕರು ಹೊರಡುವಾಗ ಆಂಧ್ರಪ್ರದೇಶದ ಕಡಪಾದಿಂದ ಬಂದಿದ್ದೇವೆಂದು ತೆಲುಗಿನಲ್ಲಿ ಉತ್ತರಿಸಿ ಅಲ್ಲಿಂದ ಹೊರಟಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಘಟನೆಯ ಹಿನ್ನಲೆಯಲ್ಲಿ ಸಚಿವರಾದ ಶ್ರೀರಾಮುಲು, ಕರುಣಾಕರ ರೆಡ್ಡಿ ಮತ್ತು ಜನಾರ್ಧನ ರೆಡ್ಡಿ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಆಧುನಿಕ ಶಶ್ತ್ರಾಸ್ತ್ರಗಳನ್ನು ಒದಗಿಸಿ ಭದ್ರತೆಗೆ ನಿಯೋಜಿಸಲಾಗಿದೆ. ಆರೋಪಿಗಳ ಸುಳಿವು ದೊರಕಿದ್ದು 2 -3 ದಿನಗಳಲ್ಲಿ ಬಂಧಿಸಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠ ನಾಗರಾಜ್ ತಿಳಿಸಿದ್ದಾರೆ.











Click it and Unblock the Notifications