ಗೂಗಲ್ ವಿರುದ್ಧ ಆಪಲ್ ಪರೋಕ್ಷ ದಾಳಿ
ಸ್ಯಾನ್
ಫ್ರಾನ್ಸಿಸ್ಕೋ, ಮಾ. 3 : ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಆಪಲ್ ಕಂಪನಿ ಎಚ್ ಟಿಸಿ ಕಂಪನಿ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ ದಾಖಲು ಮಾಡಿದೆ. id="toptextpromo">ಯುಎಸ್
ಇಂಟರ್ನ್ಯಾಷನಲ್ ಟ್ರೇಡ್ ಕಮಿಶನ್ ಮತ್ತು ಡೆಲ್ವೇರ್ ನ ಜಿಲ್ಲಾ ನ್ಯಾಯಾಲಯದಲ್ಲಿ ಆಪಲ್ ಪ್ರಕರಣ ದಾಖಲಿಸಿದೆ. ಐಫೋನ್ ಗೆ ಸಂಬಂಧಿಸಿದ 20ಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಮತ್ತು ವಿತರಿಸುವುದನ್ನು ತಡೆಯಬೇಕೆಂದು ಆಗ್ರಹಿಸಿ ಆಪಲ್ ಕಂಪನಿ ನ್ಯಾಯಾಲಯಕ್ಕೆ ಮನವಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಇತ್ತೀಚೆಗೆ
ಬಿಡುಗಡೆ ಮಾಡಲಾಗಿರುವ ಗೂಗಲ್ ನ ನೆಕ್ಸಸ್ ಒನ್ ಸ್ಮಾರ್ಟ್ ಫೋನನ್ನು ಎಚ್ ಟಿಸಿ ಉತ್ಪಾದಿಸಿದೆ. ಮೊದಕದ್ದಮೆಯಲ್ಲಿ ಗೂಗಲ್ ನ ಹೆಸರನ್ನು ಪ್ರಸ್ತಾಪಿಸಿರದಿದ್ದರೂ, ಪರೋಕ್ಷವಾಗಿ ಗೂಗಲ್ ನ ಏಕಸ್ವಾಮ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂಬುದು ಇಂಟರ್ನೆಟ್ ಪಂಡಿತ ಅಭಿಮತ.











Click it and Unblock the Notifications