ಕಂಬಾರರಿಗೆ ಪ್ರಪ್ರಥಮ ಠಾಗೂರ್ ಸಾಹಿತ್ಯ ಪ್ರಶಸ್ತಿ
ನವದೆಹಲಿ,
ನ.26: ಕನ್ನಡದ ಖ್ಯಾತ ಸಾಹಿತಿ, ರಂಗಕರ್ಮಿ ಮತ್ತು ವಿಧಾನಪರಿಷತ್ ಸದಸ್ಯರೂ ಆಗಿರುವ ಚಂದ್ರಶೇಖರ್ ಕಂಬಾರ್ ಅವರಿಗೆ 2009ನೇ ಸಾಲಿನ ಪ್ರಪ್ರಥಮ ಠಾಗೂರ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಎಂಟು ಭಾರತೀಯ ಭಾಷೆಗಳಿಗೆ ನೀಡಲಾಗುತ್ತಿದೆ. id="toptextpromo">ಸಾಹಿತ್ಯ
ಅಕಾಡೆಮಿ ಮತ್ತು ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಸಹಭಾಗಿತ್ವದಲ್ಲಿ ಠಾಗೂರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ರು.91,000 ನಗದು ಬಹುಮಾನ, ಪಾರಿತೋಷಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. id='are-slot-1' class='oiad oi-axt oiadv'> id='top-searched-articles'>ಭಾರತ
ಮತ್ತು ದಕ್ಷಿಣ ಕೊರಿಯಾ ಜಂಟಿ ಸಹಕಾರದ ಅಂಗವಾಗಿ ರವೀಂದ್ರನಾಥ್ ಠಾಗೂರರ ನೆನಪಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಕಂಬಾರರೊಂದಿಗೆ ಪ್ರಶಸ್ತಿಯನ್ನು ಪಡೆದ ಇತರೆ ಸಾಹಿತಿಗಳು...ಅಲೋಕ್ ಸರಕಾರ್(ಬಂಗಾಳಿ), ಬ್ರಜೇಂದ್ರ ಕುಮಾರ್ ಬ್ರಹ್ಮ (ಬೋಡೋ), ಭಗವತ್ ದಾಸ್ ಪಟೇಲ್(ಗುಜರಾತಿ), ರಾಜೀ ಸೇತ್ (ಹಿಂದಿ), ನಾಸಿಂ ಷರೀಪ್ (ಕಾಶ್ಮೀರಿ), ಜಸ್ಮಂತ್ ಸಿಂಗ್ ಕನ್ವಲ್ (ಪಂಜಾಬಿ) ಮತ್ತು ಕೋವೆಲ ಸುಪ್ರಸನ್ನಾಚಾರ್ಯ (ತೆಲುಗು).











Click it and Unblock the Notifications