ರಾಮಮಂದಿರ ಇತ್ಯರ್ಥ ಅಸಾಧ್ಯ, ಗೋವಿಂದಾಚಾರ್ಯ
ಹುಬ್ಬಳ್ಳಿ,
ಡಿ. 29 : ಕರ್ನಾಟಕದಲ್ಲಿ ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ಮಾಡಿರುವುದು ಹಾಗೂ ಜಾರ್ಖಂಡ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ಮೂಲಕ ಕಳಂಕಿತ ಶಿಬು ಸೊರೇನ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡುವುದರೊಂದಿಗೆ ತತ್ವ ಸಿದ್ಧಾಂತಗಳಿಗೆ ಬಿಜೆಪಿ ತಿಲಾಂಜಲಿ ನೀಡಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಕೆ ಎನ್ ಗೋವಿಂದಾಚಾರ್ಯ ಟೀಕಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ಆಸಕ್ತಿ ವಹಿಸಿಲ್ಲ. ಬಿಜೆಪಿ ಕಷ್ಟ ಕಾಲದಲ್ಲಿ ಸ್ಥಾನ ವಹಿಸಿಕೊಂಡಿರುವ ನಿತಿನ್ ಗಡ್ಕರಿ ಅವರ ಬಗ್ಗೆ ಕನಿಕರವಿದೆ. ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ಅವರು ಯಶ ಕಾಣಲಿ ಎಂದಷ್ಟೇ ಹಾರೈಸುತ್ತೇನೆ ಎಂದರು. ಸ್ವಾಭಿಮಾನಕ್ಕೆ ತೊಂದರೆಯಾದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದರು. id='are-slot-1' class='oiad oi-axt oiadv'> id='top-searched-articles'>ರಾಮಮಂದಿರ
ವಿವಾದವನ್ನು ನ್ಯಾಯಾಂಗದ ಮೂಲಕ ಬಗೆಹರಿಸಿಕೊಳ್ಳಲು ಆಗುವುದಿಲ್ಲ. ರಾಮನ ಹುಟ್ಟು, ಅಸ್ತಿತ್ವವು ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಈ ಕುರಿತು ನ್ಯಾಯಾಲಯದಲ್ಲಿ ತೀರ್ಮಾನ ಕೈಗೊಳ್ಳಲಾಗುವುದಿಲ್ಲ. ಮಾತುಕತೆ ಇಲ್ಲವೇ ಶಾಸನದ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ ಎಂದು ಗೋವಿಂದಾಚಾರ್ಯ ಅಭಿಪ್ರಾಯಪಟ್ಟರು.











Click it and Unblock the Notifications