ದೇವೇಗೌಡರ ಬೆದರಿಕೆಗೆ ಬಗ್ಗಲ್ಲ, ಸೋಮಶೇಖರರೆಡ್ಡಿ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಂದ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಚಂದ್ರಬಾಬ ನಾಯ್ಡು ಅವರು ದ್ವೇಷ ರಾಜಕಾರಣದಿಂದ ಇಲ್ಲ ಸಲ್ಲದ ಆರೋಪಗಳಲ್ಲಿ ತೊಡಗಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಆರೋಪವಿಲ್ಲ. ದೆಹಲಿಯಲ್ಲಿ ಈ ಇಬ್ಬರೂ ಸೇರಿದ್ದಾರೆ. ಆದರೆ, ಒಂದಂತೂ ಸತ್ಯ, ಇಂತಹ ಸಾವಿರ ದೇವೇಗೌಡರು ಬಂದರೂ ಜನಾರ್ದನ ರೆಡ್ಡಿಯನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಈವರೆಗೆ ರೆಡ್ಡಿ ಜನರಿಂದ ರಾಜ್ಯ ಮತ್ತು ಜನತೆಗೆ ಒಳ್ಳೆಯದಾಗಿದೆ ಹೊರತು, ಯಾವ ಅನ್ಯಾಯವನ್ನು ಮಾಡಿಲ್ಲ. ದೇವರು ಮತ್ತು ನ್ಯಾಯದ ಮೇಲೆ ನಮಗೆ ಅಪಾರ ನಂಬಿಕೆಯಿದೆ. ಗೆಲುವು ನಮಗೆ ದೊರೆಯಲಿದೆ ಎಂದು ಸೋಮಶೇಖರರೆಡ್ಡಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications