ಜೆಡಿಎಸ್- ಕಾಂಗ್ರೆಸ್ ಮೈತ್ರಿ, ಕಮಲಕ್ಕೆ ಗಡಗಡ

ಬೆಂಗಳೂರು ಗ್ರಾಮಾಂತರ ಕುರಿತೂ ಕೊಂಚ ಗೊಂದಲವಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಿಂದ ಒಂದು ಕ್ಷೇತ್ರ ನೀಡುವಂತೆ ಜೆಡಿಎಸ್ ಕೇಳಿದೆ. ಹೊಂದಾಣಿಕೆ ಅಂತಿಮ ಹಂತದಲ್ಲಿ ಮುರಿದುಬಿದ್ದರೆ ಎಲ್ಲ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ತಯಾರಿ ನಡೆಸಿದೆ. ಮೈತ್ರಿ ಆದರೂ 5-6 ಕಡೆ ಅನುಕೂಲ ದೃಷ್ಟಿಯಿಂದ ಎರಡೂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಬಹುದು.
ಕಾಂಗ್ರೆಸ್ ನಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರ್ ವಿ ದೇಶಪಾಂಡೆ ಬದಲು ಎಸ್ ಎಲ್ ಗೋಟ್ನೇಕರ್ ಅವರ ಹೆಸರು ಅಂತಿಮಗೊಂಡಿದೆ. ಶನಿವಾರ ಮಾತುಕತೆ ನಂತರ ಬೆಂಗಳೂರು ಗ್ರಾಮಾಂತರ- ರವಿ, ದಕ್ಷಿಣ ಕನ್ನಡ- ಪ್ರತಾಪಚಂದ್ರಶೆಟ್ಟಿ, ಉತ್ತರ ಕನ್ನಡ-ಎಸ್ ಎಲ್ ಗೋಟ್ನೇಕರ್, ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ, ಕೊಡಗು- ಜಾನ್, ಮೈಸೂರು- ಮಂಜುನಾಥ, ರಾಯಚೂರು-ಬಸವರಾಜ ಇಟಗಿ, ಗುಲ್ಬರ್ಗಾ-ಅಲ್ಲಮಪ್ರಭು ಪಾಟೀಲ್, ಬೆಳಗಾವಿ- ವೀರಕುಮಾರ್ ಪಾಟೀಲ್, ಬಾಗಲಕೋಟಿ-ಎಸ್ ಆರ್ ಪಾಟೀಲ್ ಹೆಸರು ಅಂತಿಮಗೊಂಡಿದೆ.
ಜೆಡಿಎಸ್ ಕೂಡಾ ಮಂಡ್ಯ-ರಾಮಕೃಷ್ಣ, ಮೈಸೂರು-ಸಂದೇಶ ನಾಗರಾಜ್, ತುಮಕೂಕು- ಡಾ ಹುಲಿನಾಯ್ಕರ್, ಹಾಸನ- ಪಟೇಲ್ ಶಿವರಾಮ್, ಚಿತ್ರದುರ್ಗ-ಸಿದ್ಧೇಶ್ ಹೆಸರನ್ನು ಅಂತಿಮಗೊಳಿಸಿದೆ. ಮೈತ್ರಿ ಅಂತಿಮಗೊಂಡಲ್ಲಿ ಕೆಲವೊಂದು ಬದಲಾವಣೆ ಆಗುವ ಸಾಧ್ಯತೆ ಇದೆ. ಇಂದು ಸಂಜೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬೀಳಲಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications