ಕೊನೆಗೂ ವಂಚಿತೆ ಪ್ರಿಯಾಂಕಾಗೆ ಬುದ್ಧಿಬಂತು !

Priyanka
ಬೆಂಗಳೂರು, ನ. 18 : ಪ್ರೀತಿಸಿದವನಿಂದ ವಂಚನೆಗೊಳಗಾದ ಪ್ರಿಯಾಂಕಾಗೆ ಕೊನೆಗೂ ಬುದ್ಧಿ ಬಂದಿದೆ. ಅವನಾಗಿಯೇ ಬಂದು ನನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದರೂ ಸಹ ಆತನ ಜೊತೆ ನಾನು ಹೋಗುವುದಿಲ್ಲ. ಇನ್ನೇನಿದ್ದರೂ ನನ್ನದು ನನ್ನ ಭವಿಷ್ಯದ ಬಗೆಗಿನ ಚಿಂತನೆ ಮಾತ್ರ ಎಂದು ಮಂಗಳವಾರ ತಿಳಿಸಿದ್ದಾರೆ.

ಅವನೊಬ್ಬ ಮೋಸಗಾರ, ವಂಚಕ ಮತ್ತು ಪ್ರೀತಿ ಎದುರಿಸಲಾಗದೇ ಹೆದರಿ ಓಡಿದ ಹೇಡಿ. ಅವನಿಗೆ ತಕ್ಕ ಶಿಕ್ಷೆಯಾಗಬೇಕು. ನನ್ನಂತೆ ಮತ್ಯಾವ ಹೆಣ್ಣುಮಕ್ಕಳಿಗೂ ಈ ರೀತಿಯ ಅನ್ಯಾಯವಾಗಬಾರದು. ಅವನಿಗೆ ಶಿಕ್ಷೆಯಾಗುವವರೆಗೂ ವಿರಮಿಸುವುದಿಲ್ಲ. ಅದರೊಂದಿಗೆ ನನ್ನ ಓದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು. ಜೀವನದಲ್ಲಿ ತಿಳಿಯದೇ ಅವನ ಭರವಸೆಗಳನ್ನು ನಂಬಿ ಮೋಸ ಹೋಗಿದ್ದೇನೆ. ನನ್ನ ಪ್ರೀತಿ ನನಗೆ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಈಗಾಗಲೇ ಒಂದು ಬಾರಿ ಜೀವನದಲ್ಲಿ ಕಾಲು ಜಾರಿದ್ದೇನೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ನಾನು ಅಪರಾಧಿಯಲ್ಲ. ಅವನ ಮಾತಿಗೆ ಮತ್ತು ನಂಬಿಕೆಗೆ ಬೆಲೆ ಕೊಟ್ಟು ಸೋತಿದ್ದೇನೆ ಎನ್ನುತ್ತಾರೆ.

ಆನಂದ ನನ್ನನ್ನು ಮತ್ತು ನಾನು ಆನಂದನನ್ನು ಪರಸ್ಪರ ಪ್ರೀತಿಸಿದ್ದು ಸತ್ಯ. ಅವನು ನನ್ನನ್ನು ಮದುವೆಯಾಗುವ ಕಾರಣಕ್ಕಾಗಿಯೇ ನನ್ನ ನಿಕಾರಣೆಯ ಮಧ್ಯೆ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಮದುವೆ ಮಂಟಪಕ್ಕೆ ಹೋಗಿದ್ದು ಜಗಳ ಮಾಡಲು ಅಲ್ಲ. ಅವನು ನನ್ನನ್ನೇ ಕಟ್ಟಿಕೊಳ್ಳುತ್ತಾನೆ ಎಂಬ ಭರವಸೆಯಿಂದ ಎಂದು ಪ್ರಿಯಾಂಕಾ ಅಮಾಯಕವಾಗಿ ಹೇಳುತ್ತಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+