ಬೆಂಗಳೂರು ಮಳೆಗೆ ಕೊಚ್ಚಿಹೋದ ಮಗು
ಬೆಂಗಳೂರು, ಜೂ.1: ಭಾನುವಾರ ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಮಗುವೊಂದು ಲಿಂಗರಾಜಪುರ ಮೋರಿಯಲ್ಲಿ ಕೊಚ್ಚಿಹೋದ ದಾರುಣ ಘಟನೆ ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ತೀವ್ರ ಹುಡುಕಾಟ ನಡೆಸಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ಭಾನುವಾರ ಬಿದ್ದ ಧಾರಾಕಾರ ಮಳೆಗೆ ನಗರದ ಕೆಲವು ಕಡೆ ಮರಗಳು ನೆಲಕ್ಕುರುಳಿದ್ದು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತೆರವು ಗೊಳಿಸಿದ್ದಾರೆ. ಮೈಸೂರು ರಸ್ತೆ, ಜೆಸಿ ರಸ್ತೆ, ಚಾಮರಾಜಪೇಟೆ, ವೈಯಾಲಿಕಾವಲ್, ಲಿಂಗರಾಜಪುರ ಮುಂತಾದಡೆ ಮನೆಗಳಿಗೆ ನೀರು ನುಗ್ಗಿದೆ.
ಹವಾಮಾನ ಇಲಾಖೆ ನಗರದಲ್ಲಿ ಇನ್ನೂ ಎರಡು - ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆಯೆಂದು ಎಚ್ಚರಿಸಿದೆ. ರಾಜ್ಯದಲ್ಲಿ ಮುಂಗಾರು ಚುರುಕು ಗೊಂಡಿದ್ದು ಬೆಂಗಳೂರು, ಕೋಲಾರ, ತುಮಕೂರು, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವ ವರದಿಯಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications