ನಕ್ಸಲರ ಬಗ್ಗೆ ಮಾಹಿತಿ ಕೊಟ್ಟವರಿಗೆ 1ಲಕ್ಷ ಬಹುಮಾನ!
ಬೆಂಗಳೂರು :ನಕ್ಸಲರ ವಿಚಾರವನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸಿದೆ.ನಕ್ಸಲರ ಬಗ್ಗೆ ಮಾಹಿತಿ ಕೊಟ್ಟವರಿಗೆ 1ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪ್ರಕಟಿಸಲಾಗಿದೆ.
26ಮಂದಿ ನಕ್ಸಲರು ಮತ್ತು ನಕ್ಸಲ್ ಬೆಂಬಲಿತ ಸಂಘಟನೆಗಳ ವಿವರಗಳನ್ನು ಪೊಲೀಸ್ ಇಲಾಖೆ ಪ್ರಕಟಿಸಿದೆ.ಈ ವ್ಯಕ್ತಿಗಳ ಬಗ್ಗೆ ಸುಳಿವು ಕೊಟ್ಟವರಿಗೆ ಸೂಕ್ತ ಬಹುಮಾನ ಉಂಟು ಎಂದು ಇಲಾಖೆ ಹೇಳಿದೆ.
ಅಲ್ಲದೇ ನಕ್ಸಲರ ಬಗ್ಗೆ ಅನುಕಂಪ ವ್ಯಕ್ತಪಡಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಲು ಇಲಾಖೆ ನಿರ್ಧರಿಸಿದೆ. ಈ ಪಟ್ಟಿಯಲ್ಲಿ ಗೌರಿ ಲಂಕೇಶ್ ರ ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಮಹಿಳಾ ಜಾಗೃತಿ ವೇದಿಕೆ, ಶಾಂತಿಗಾಗಿ ನಾಗರಿಕ ವೇದಿಕೆ, ಜಾತಿ ವಿನಾಶ ವೇದಿಕೆಗಳೂ ಇವೆ.
ಈವರೆಗಿನ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಎಂಟು ನಕ್ಸಲರು, ಏಳು ಜನ ಪೊಲೀಸರು, ಇಬ್ಬರು ಸಾರ್ವಜನಿಕರು, ಒಬ್ಬ ಮಾಹಿತಿದಾರ ಸಾವನ್ನಪ್ಪಿರುವ ಅಂಶವನ್ನು ಕಾನೂನು ಸುವ್ಯವಸ್ಥೆ ಎಡಿಜಿಪಿ ಶಂಕರ ಬಿದರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications