ಶ್ವಾನ ಕುಲದ ಉಳಿವಿಗಾಗಿ ಊಟ ತ್ಯಜಿಸಿದ ಸ್ವಾಮೀಜಿ!
ಬೆಂಗಳೂರು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಸೇರಿದಂತೆ ವಿವಿಧ ಗಣ್ಯರು, ಶ್ವಾನ ಪ್ರೇಮದ ನುಡಿಮುತ್ತುಗಳ ಉದುರಿಸಿ ಸುಮ್ಮನಾದರು. ಇತ್ತ ಸ್ವಾಮೀಜಿಯಾಬ್ಬರು ನಾಯಿಗಳ ಹಿತಕ್ಕಾಗಿ ಗಾಂಧಿ ಹಾದಿಯನ್ನು ತುಳಿದಿದ್ದಾರೆ.
ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ನಾಯಿ ಸಂಹಾರ ನಿಲ್ಲಿಸಬೇಕೆಂದು ನಗರದ ಪುರಭವನದ ಬಳಿ ಆಮರಣ ಉಪವಾಸ ಆರಂಭಿದ್ದಾರೆ.
ನಾಯಿ ಮತ್ತು ಮನುಷ್ಯರ ಸಂಬಂಧ ಇಂದು-ನಿನ್ನೆಯದಲ್ಲ. ಮನುಷ್ಯ ಕುಲದ ಆಪ್ತ ಗೆಳೆಯನಾದ ನಾಯಿಗಳನ್ನು ಕೊಲ್ಲುವುದು ಸಲ್ಲದು. ಒಂದೆರಡು ನಾಯಿಗಳು ಕಚ್ಚಿದ ಮಾತ್ರಕ್ಕೆ ನಾಯಿಕುಲವನ್ನೇ ನಿರ್ವಂಶ ಮಾಡುವ ಪ್ರಯತ್ನ ಸಲ್ಲದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications